ಬನಶಂಕರಿ, ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಪೂಜೆ

17-10-HNPP 3
ಹೊಳೆನರಸೀಪುರದ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ದೇವಿಯನ್ನು ಅವರೇಕಾಳಿನಿಂದ ಅಲಂಕರಿಸಲಾಗಿತ್ತು.
Published on

ಹೊಳೆನರಸೀಪುರ: ಶರನ್ನಾವರಾತ್ರಿ ಪ್ರಯುಕ್ತ ಪಟ್ಟಣದ ಬನಶಂಕರಿ ದೇವಾಲಯ ಹಾಗೂ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಗೊಂಬೆಗಳ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬನಶಂಕರಿ ದೇವಾಲಯದಲ್ಲಿ ಮಂಗಳವಾರ ತಾಯಿ ಬನಶಂಕರಿಗೆ ಅವರೇಕಾಳು ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಕೃತಾರ್ತರಾದರು.

ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮ ಮತ್ತು ಉತ್ಸವ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಗೊಂಬೆಗಳನ್ನು ದೇವಾಲಯದ ಆವರಣದಲ್ಲಿ ಸಿಂಗರಿಸಲಾಗಿತ್ತು. ಆರ‌್ಯವೈಶ್ಯ ಸಮಾಜದ ಮಹಿಳೆಯರು ಭಾಗವಹಿಸಿ ಉತ್ಸವ ಮೂರ್ತಿಗಳಿಗೆ ಪುಷ್ಪ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net