

ಬೆಂಗಳೂರು: ಪವಿತ್ರ ಧಾರ್ಮಿಕ ಕೇಂದ್ರವಾದ ಬನಶಂಕರಿ ದೇವಾಲಯದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ದೇವಾಲಯದ ಆಡಳಿತ ಮಂಡಳಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ದೇವಾಲಯದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮುಖಮಂಟಪ, ಸೇವಾ ಭವನ ಹಾಗೂ ಲ್‌ಟಿನ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬನಶಂಕರಿ ದೇವಸ್ಥಾನದ ಭದ್ರತಾ ಸಿಬ್ಬಂದಿಯು ಭಕ್ತರ ಜತೆಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ದೂರುಗಳು ಬಂದಿವೆ. ಅಂತಹವರಿಗೆ ನೋಟಿಸ್ ಕೊಡಿ ಎಂದು ಸೂಚನೆ ನೀಡಿದರು.
ದೇವಾಲಯದ ಮುಖಮಂಟಪ ಮಾಡಲು ದಾನಿ ರಾಜೇಂದ್ರನ್ ದೇಣಿಗೆ ನೀಡಿದ್ದಾರೆ. ಉಳಿದಂತೆ ವಿಶೇಷ ಪೂಜೆ ಮಾಡಿಸುವ ಭಕ್ತರು ಏಕಕಾಲದಲ್ಲಿ ನೂರು ಮಂದಿ ಕುಳಿತು ಊಟ ಮಾಡಲು ಅನುಕೂಲವಾಗುವಂತೆ ಮುಜರಾಯಿ ಇಲಾಖೆಯಿಂದ ಸಭಾಭವನ ನಿರ್ಮಿಸಲಾಗಿದೆ. ನೆಲಮಹಡಿಯಲ್ಲಿ ತಯಾರಿಸಿದ ಊಟವನ್ನು ಮೇಲಿನ ಮಹಡಿಗಳಿಗೆ ಕೊಂಡೊಯ್ಯಲು ಅನುಕೂಲವಾಗುವಂತೆ ಲ್‌ಟಿ ನಿರ್ಮಿಲಾಗಿದೆ. ಇದು ಭಕ್ತರಿಗೆ ಮತ್ತು ಆಡಳಿತ ಮಂಡಳಿಯವರಿಗೂ ಅನುಕೂಲಕರವಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಬನಶಂಕರಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.