

ಬೆಂಗಳೂರು: ಬನಶಂಕರಿ ದೇವಸ್ಥಾನದ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಿನ್ನೆಲೆಯಲ್ಲಿ ಜ.6ರ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಕನಕಪುರ ಮುಖ್ಯರಸ್ತೆಯಲ್ಲಿ ಸಂಚಾರ ಮಾರ್ಗದಲ್ಲಿ ಮಾರ್ಪಾಡು ಮಾಡಿ ನಗರ ಸಂಚಾರ ಪೊಲೀಸರು ಆದೇಶಿಸಿದ್ದಾರೆ.
ಸಾರಕ್ಕಿ ಮಾರ್ಕೆಟ್ ಜಂಕ್ಷನ್‌ನಿಂದ ಬನಶಂಕರಿ ಬಸ್ ನಿಲ್ದಾಣ ಜಂಕ್ಷನ್ವರೆಗೆ ಎಲ್ಲ ಮಾದರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.
ಕನಕಪುರ ಮುಖ್ಯರಸ್ತೆಯಿಂದ ನಗರ ಪ್ರವೇಶಿಸುವ ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಬಸ್‌ಗಳು ಸಾರಕ್ಕಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಇಲಿಯಾಸ್‌ನಗರ ಜಂಕ್ಷನ್ ಮೂಲಕ ಕೆಎಸ್ ಲೇಔಟ್‌ನ ಜಂಕ್ಷನ್‌ಗೆ ಬಂದು ಸರ್ವಿಸ್ ರಸ್ತೆ ಮೂಲಕ ಬೇಂದ್ರೆ ಸರ್ಕಲ್ ಪ್ರವೇಶಿಸಿ ಯಾರಬ್ ನಗರ ಜಂಕ್ಷನ್ ಮೂಲಕ ನೇರವಾಗಿ ಬನಶಂಕರಿ ಬಸ್ ನಿಲ್ದಾಣಕ್ಕೆ ಬರಬಹುದು.
ದ್ವಿಚಕ್ರ ವಾಹನ, ಲಘು ವಾಹನಗಳು ಸಾರಕ್ಕಿ ಜಂಕ್ಷನ್ ಮೂಲಕ ಸಾರಕ್ಕಿ ಮಾರ್ಕೆಟ್ ಜಂಕ್ಷನ್ವರೆಗೆ ಪ್ರವೇಶಿಸಿ ಬಲ ತಿರುವು ಪಡೆದು ಇಂದಿರಾಗಾಂಧಿ ಸರ್ಕಲ್‌ನಲ್ಲಿ ನಗರದ ಒಳ ಪ್ರವೇಶ ಮಾಡಬಹುದು. ನಗರದಿಂದ ಕನಕಪುರದ ಕಡೆಗೆ ಸಾಗುವ ವಾಹನಗಳು ಬನಶಂಕರಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಯಾರಬ್‌ನಗರ ಜಂಕ್ಷನ್ ಮೂಲಕ ಕೆ.ಎಸ್.ಲೇಔಟ್ ಜಂಕ್ಷನ್‌ಗೆ ಬಂದು ಎಡತಿರುವು ಪಡೆದು ರಿಂಗ್ ರಸ್ತೆಯಲ್ಲಿ ಸಾಗಿ ಇಲಿಯಾಸ್ ನಗರ ಜಂಕ್ಷನ್ ಮೂಲಕ ಸಾರಕ್ಕಿ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕನಕಪುರ ಮುಖ್ಯರಸ್ತೆಗೆ ಸೇರಬೇಕು. ಸಾರ್ವಜನಿಕರು ತಾತ್ಕಾಲಿಕ ಸಂಚಾರ ಮಾರ್ಗ ಮಾರ್ಪಾಡಿಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.