

ಹುಬ್ಬಳ್ಳಿ: ಹಳೇಹುಬ್ಬಳ್ಳಿ ದೇವಾಂಗ ಸಮಾಜದ ವತಿಯಿಂದ ಶ್ರೀ ಬನಶಂಕರಿದೇವಿಯ 68ನೇ ಜಾತ್ರಾ ಮಹೋತ್ಸವವನ್ನು ಫೆ. 12ರಂದು ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2ಕ್ಕೆ ಸುಮಂಗಲೆಯರ ಆರತಿ, ಕುಂಭ ವಾದ್ಯಮೇಳದೊಂದಿಗೆ ದೇವಿಯ ಪಲ್ಲಕ್ಕಿ ಉತ್ಸವ ಹಳೇಹುಬ್ಬಳ್ಳಿ ಬನಶಂಕರಿ ದೇವಸ್ಥಾನದಿಂದ ಹೊರಡಲಿದೆ.
ಬಮ್ಮಾಪುರ ಓಣಿ, ಬಾರದಾನ ಸಾಲ, ವೀರಾಪುರ ಓಣಿ ಮುಖಾಂತರ ಸಿದ್ಧನಪೇಟೆಯಲ್ಲಿರುವ ಚೋಳಿನವರ ಓಣಿಯಲ್ಲಿರುವ ಬನಶಂಕರಿ ದೇವಸ್ಥಾನಕ್ಕೆ ತಲುಪುವ ಪಲ್ಲಕ್ಕಿಯನ್ನು ದೇವಸ್ಥಾನ ಟ್ರಸ್ಟ್ ಮಂಡಳಿ, ದೇವಾಂಗ ಸಮಾಜದವರು ಸ್ವಾಗತಿಸಿ ಮಹಾಮಂಗಳಾರತಿ ನೆರವೇರಿಸುವರು.
ಹಳೇಹುಬ್ಬಳ್ಳಿ ದೇವಸ್ಥಾನಕ್ಕೆ ಪಲ್ಲಕ್ಕಿ ಆಗಮಿಸಿದ ನಂತರ ರಥೋತ್ಸವ ಜರುಗಲಿದೆ. ಫೆ. 13ರಂದು ಸಂಜೆ ಕಡುಬಿನ ಕಾಳಗ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ ಕಮಿಟಿ ಪ್ರಕಟಣೆ ತಿಳಿಸಿದೆ.