

ಚಿಮ್ಮಡ: ಗ್ರಾಮದ ಹಟಗಾರ ಸಮಾಜದ ಆರಾಧ್ಯ ದೇವತೆ ಬನಶಂಕರಿದೇವಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಫೆ.12ರಂದು ವಿಜೃಂಭಣೆಯಿಂದ ಜರುಗಲಿದೆ.
ಬೆಳಗ್ಗೆ 6ಗಂಟೆಯಿಂದ ಹೋಮ, ರುದ್ರಾಭಿಷೇಕ, ನವಗ್ರಹಪೂಜೆ ಜರುಗಲಿದೆ. ಮಧ್ಯಾಹ್ನ ದೇವಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ನಂತರ ಮಹಾಪ್ರಸಾದ ವಿತರಿಸಲಾಗುವುದು. ಸಂಜೆ 5 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಡಿ ಮಜಲು, ಡೊಳ್ಳು ಕುಣಿತ, ಬಾಜಾ ಭಜಂತ್ರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.
ರಾತ್ರಿ 10ಗಂಟೆಗೆ ಬನಶಂಕರಿದೇವಿ ಸಾಂಸ್ಕೃತಿಕ ವೇದಿಕೆ ಹಾಗೂ ಬನಶಂಕರಿದೇವಿ ದೇವಸ್ಥಾನ ಸಮಿತಿಯ ಸಯುಂಕ್ತಾಶ್ರಯದಲ್ಲಿ ವಿಎಂಜಿಎಸ್ ಮೆಲೋಡಿಸ್ ಮಹಾಲಿಂಗಪುರ ಅವರಿಂದ ಸಂಗೀತೋತ್ಸವ-2025 ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬನಶಂಕರಿದೇವಿ ದೇವಸ್ಥಾನ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.