

ಗೊಳಸಂಗಿ: ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ದೇವಿಗೆ ಅಭಿಷೇಕ, ವಿಶೇಷ ಪೂಜೆಯನ್ನು ವೇದಮೂರ್ತಿ ಹುಚ್ಚಯ್ಯಸ್ವಾಮಿ ದೇವಾಂಗಮಠ, ಮಲ್ಲಪ್ಪ ಹವೇಲಿ ನೆರವೇರಿಸಿದರು.
ಮಹಾರಥದ ಎದುರು ಹೋಮವನ್ನು ದೇವಾಂಗಮಠದ ರಾಘವೇಂದ್ರಸ್ವಾಮಿ ಮತ್ತು ಪರಿವಾರದವರು ನಡೆಸಿಕೊಟ್ಟರು. ಮಧ್ಯಾಹ್ನ 1ಗಂಟೆಗೆ ಪಲ್ಲಕ್ಕಿ, ಮಾರುತೇಶ್ವರ ಕಲಶದ ಮೆರವಣಿಗೆ, ಸಂಜೆ 6ಗಂಟೆಗೆ ಬನಶಂಕರಿ ದೇವಿ ಮಹಾರಥೋತ್ಸವ ಜರುಗಿತು. ಈ ವೇಳೆ ಭಕ್ತರು ಬನಶಂಕರಿ ನಿನ್ನ ಪಾದಕ ಶಂಭೂಕೊ ಘೋಷಣೆ ಕೂಗುತ್ತ ಬಾಳೆಹಣ್ಣು, ಉತ್ತತ್ತಿ, ಬೆಂಡು, ಬತ್ತಾಸು ಮತ್ತಿತರ ವಸ್ತುಗಳನ್ನು ರಥದ ಮೇಲೆ ಎಸೆದು ಭಕ್ತಿ ತೋರಿದರು.