

ಮುಂಡರಗಿ: ಪಟ್ಟಣ ಸೇರಿ ಹಲವೆಡೆ ಶನಿವಾರ ಬಿರುಸಾದ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಹೊರವಲಯದ ತೋಟದಲ್ಲಿನ ಬಾಳೆ ಬೆಳೆ ನೆಲಕಚ್ಚಿದೆ.
ರೈತ ಎಸ್.ವಿ. ಪಾಟೀಲ ಅವರ ಎಂಟು ಎಕರೆ ಜಮೀನಿನಲ್ಲಿರುವ ಬಾಳೆ ಗಿಡ ನೆಲಕಚ್ಚಿವೆ. ಕೆಲವೊಂದಿಷ್ಟು ನಿಂತಿರುವ ಗಿಡಗಳು ರಭಸದ ಗಾಳಿಗೆ ಸಂಪೂರ್ಣವಾಗಿ ಬೆಂಡಾಗಿವೆ. 8 ಎಕರೆಯಲ್ಲಿ 12 ಸಾವಿರ ಬಾಳೆ ಸಸಿ ನೆಟ್ಟು 10 ತಿಂಗಳಿಂದ ಪಾಲನೆ, ಪೋಷಣೆ ಮಾಡಿ ಉತ್ತಮ ರೀತಿ ಬೆಳೆಸಿದ್ದರು. ಈಗಾಗಲೆ ಬಾಳೆಗಿಡ ಗೊನೆ ಬಿಡುವುದಕ್ಕೆ ಪ್ರಾರಂಭಿಸಿದ್ದವು. ಸಸಿ, ಗೊಬ್ಬರ, ಕೂಲಿ, ನಿರ್ವಹಣೆ ಸೇರಿ ಪ್ರತಿ ಎಕರೆಗೆ 1 ಲಕ್ಷ ರೂ.ನಂತೆ ಸುಮಾರು 8 ಲಕ್ಷ ರೂ. ವರೆಗೂ ಖರ್ಚು ಮಾಡಿದ್ದರು. ಉತ್ತಮ ಲಾಭದ ನಿರೀಕ್ಷೆ ಹೊಂದಿದ್ದರು. ಆದರೆ, ಈಗ ಬಿರುಸಾದ ಗಾಳಿ, ವರುಣನ ಆರ್ಭಟಕ್ಕೆ ಕಂಗಾಲಾಗಿದ್ದಾರೆ.
ಎಂಟು ಎಕರೆಯಲ್ಲಿ ಬಾಳೆ ಗೊನೆ ಬಿಡುವುದಕ್ಕೆ ಪ್ರಾರಂಭಿಸಿತ್ತು. ಮೂರು ದಿನಗಳಿಂದ ಬಿರುಗಾಳಿ ಸಮೇತ ಸುರಿದ ಮಳೆಗೆ ಬಾಳೆ ಗಿಡಗಳು ನೆಲಕಚ್ಚಿವೆ. ಇನ್ನು ಮೂರು ತಿಂಗಳಲ್ಲಿ ಫಸಲು ಕೈಸೇರುತ್ತಿತ್ತು. ಆದರೆ, ಮಳೆಯಿಂದಾಗಿ 40 ರಿಂದ 50 ಲಕ್ಷ ರೂ. ವರೆಗೆ ಆದಾಯ ನಷ್ಟವಾಗಿದೆ. ಎಸ್.ವಿ. ಪಾಟೀಲ ರೈತ ಮುಂಡರಗಿ