

ದೊಡ್ಡಬಳ್ಳಾಪುರ ಗ್ರಾಮಾಂತರ: ತಾಲೂಕಿನ ಮಧುರೆ ಹೋಬಳಿಯ ಸಿಂಪಾಡಿಪುರದಲ್ಲಿ ಬುಧವಾರ ತಡ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಹಲವು ಮನೆಗಳು ಜಖಂಗೊಂಡಿವೆ.
ಮಳೆ ಕಡಿಮೆ ಪ್ರಮಾಣದಲ್ಲಿ ಸುರಿದರೂ ಬಾರಿಗಾಳಿಯಿಂದಾಗಿ ಗ್ರಾಮದ ರಮೇಶ ಎಂಬುವರ ಅಂಗಡಿ ಮನೆ ಸಂಪೂರ್ಣ ಹಾಳಾಗಿದ್ದು, ಬಹುತೇಕ ಮನೆಗಳ ಶೀಟ್ ಹಾರಿವೆ. ಕರೊನಾ ಸಮಸ್ಯೆ ಜತೆ ಬಾರಿಗಾಳಿಯಿಂದ ಮನೆ ಕಳೆದುಕೊಂಡವರು ಬೀದಿಗೆ ಬಂದಂತಾಗಿದೆ.
ಸಮೀಪದ ಹೊನ್ನಾವರ ಹಾಗೂ ಗೂಳ್ಯ ಗ್ರಾಮಗಳ ವ್ಯಾಪ್ತಿಯಲ್ಲಿ ಬಾರಿ ಗಾಳಿ ಮಳೆಯಿಂದಾಗಿ ಬಹುತೇಕ ಬಾಳೆ ಗಿಡಗಳು ನೆಲಕಚ್ಚಿವೆ. ರೈತ ಪ್ರಕಾಶ್ ತೋಟದ ಸಲಿಗೆ ಬಂದಿದ್ದ ಎರಡು ಸಾವಿರ ಬಾಳೆ ಗಿಡಗಳು ನಾಶವಾಗಿದ್ದು, ಈ ಭಾಗದ ರೈತರು ಕಂಗಾಲಾಗಿದ್ದಾರೆ.
ಈಗಾಗಲೇ ಕರೊನಾದಿಂದ ಕೃಷಿಗೆ ಹೆಚ್ಚು ನಷ್ಟವಾಗಿದ್ದು, ಬಾರಿ ಗಾಳಿ ಮಳೆಯಿಂದಾಗಿ ಮನೆ ಬಾಳೆ ತೋಟಗಳು ನಾಶವಾಗಿರುವುದು ಬಡರೈತರ ಬದುಕು ಬೀದಿಗೆ ಬಂದಿದೆ. ಪ್ರಕಾಶ್, ರೈತ ಬೆಳೆ ನಷ್ಟಕ್ಕೆ ಕೃಷಿ ಇಲಾಖೆಯಿಂದ ಪರಿಹಾರ ಪಡೆಯಬಹುದು. ನಮ್ಮ ಪಂಚಾಯಿತಿಯಿಂದ ಮನೆ ಕಳೆದುಕೊಂಡವರಿಗೆ ಯೋಜನೆಯಡಿ ಪ್ರಥಮ ಆದ್ಯತೆ ನೀಡಲಾಗುವುದು. ಮುರುಡಯ್ಯ, ಕಾರ್ಯನಿರ್ವಾಹಣ ಅಧಿಕಾರಿ