ಕಾಡಾನೆಗಳ ದಾಳಿಗೆ ಬಾಳೆ ಬೆಳೆ ನಾಶ

Oplus_131072
ನಂಜನಗೂಡು ತಾಲೂಕು ದೇವರಾಯಶೆಟ್ಟಿಪುರ (ಹಂಚಿಪುರ ) ಗ್ರಾಮದಲ್ಲಿ ಶುಕ್ರವಾರ ಕಾಡಾನೆಗಳ ದಾಳಿ ಬಾಳೆ ತೋಟ ನಾಶವಾಗಿರುವುದು.
Published on

ನಂಜನಗೂಡು: ತಾಲೂಕಿನ ದೇವರಾಯಶೆಟ್ಟಿಪುರ(ಹಂಚಿಪುರ) ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಎರಡು ಕಾಡಾನೆ ಬಾಳೆ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿವೆ. ಗ್ರಾಮದ ನಾಗಪ್ಪ ಅವರ ಬಾಳೆ ತೋಟಕ್ಕೆ ಶುಕ್ರವಾರ ತಡರಾತ್ರಿ ಓಂಕಾರ್ ಅರಣ್ಯ ವ್ಯಾಪ್ತಿ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದ್ದು, ಗೊನೆ ಬಂದಿರುವ 150 ರಿಂದ 200 ಬಾಳೆ ಗಿಡಗಳನ್ನು ತಿಂದು, ತುಳಿದು ನಷ್ಟ ಉಂಟು ಮಾಡಿವೆ.

ಸ್ಥಳಕ್ಕೆ ಓಂಕಾರ್ ಅರಣ್ಯ ವ್ಯಾಪ್ತಿಯ ಅಧಿಕಾರಿ ನಿಂಗರಾಜು ಪರಿಶೀಲನೆ ನಡೆಸಿ ಪರಿಹಾರ ಸಂಬಂಧ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net