ಆನೆಗಳ ದಾಳಿಗೆ ಬಾಳೆ, ಅಡಕೆ ಗಿಡ ನಾಶ

nrp elle
ಲಿಂಗಾಪುರ ಗ್ರಾಮದಲ್ಲಿ ಕಾಡಾನೆಗಳು ನೇಂದ್ರ ಬಾಳೆ ಹಾಗೂ ಅಡಕೆ ಗಿಡಗಳನ್ನು ನಾಶಪಡಿಸಿರುವುದು.
Published on

ಎನ್.ಆರ್.ಪುರ: ಭದ್ರಾ ಹಿನ್ನೀರು ವ್ಯಾಪ್ತಿಯ ಲಿಂಗಾಪುರ ಹಾಗೂ ಹಿಳುವಳ್ಳಿ ಗ್ರಾಮಗಳ ಅಂಚಿನಲ್ಲಿ ಆನೆಗಳ ಹಿಂಡು ದಾಳಿ ಮಾಡಿ ಬಾಳೆ ಹಾಗೂ ಅಡಕೆ ಬೆಳೆ ನಾಶಪಡಿಸಿದೆ.

ಲಿಂಗಾಪುರ ಗ್ರಾಮದಲ್ಲಿ ಜನನಿ ಗಿರೀಶ್ ಎಂಬುವರ ತೋಟಕ್ಕೆ ನುಗ್ಗಿದ ಆನೆಗಳು ನೇಂದ್ರ ಬಾಳೆ ಹಾಗೂ ಅಡಕೆ ಗಿಡಗಳನ್ನು ನಾಶಪಡಿಸಿವೆ. ಗ್ರಾಮದ ವ್ಯಾಪ್ತಿಯಲ್ಲೇ ಬೀಡುಬಿಟ್ಟಿರುವ ಕಾಡಾನೆಗಳನ್ನು ಗ್ರಾಮಸ್ಥರು ಮಂಗಳವಾರ ಬೆಳಗ್ಗೆ ಓಡಿಸುವ ಪ್ರಯತ್ನ ಮಾಡಿದರು. ದಟ್ಟ ಅರಣ್ಯದಲ್ಲಿದ್ದ ಕಾಡಾನೆಗಳು ಸಂಜೆ ಪುನಃ ತೋಟದ ಸಮೀಪ ಬಂದವು. 10ಕ್ಕೂ ಹೆಚ್ಚು ಆನೆಗಳು ಹಿಂಡಿನಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net