14ರಂದು ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ

Banajiga Samaj Talent Award on the 14th
ಜಮಖಂಡಿ ನಗರದ ದಾನಮ್ಮದೇವಿ ದೇವಸ್ಥಾನದ ಸಭಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷ ಉಮೇಶ ಬಾಂಗಿ ಮಾತನಾಡಿದರು. ಉಪಾಧ್ಯಕ್ಷ ಎಸ್.ಎಸ್. ಕಂಕಣವಾಡಿ, ಪ್ರಧಾನ ಕಾರ್ಯದರ್ಶಿ ಎಂ.ಆರ್. ಜಿರಲಿ ಇದ್ದರು.
Published on

ಜಮಖಂಡಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಮಖಂಡಿ ನಗರ ಘಟಕ ಹಾಗೂ ಬಣಜಿಗ ದೈವ ಮಂಡಳಿ ಸಹಯೋಗದೊಂದಿಗೆ ದಾನಮ್ಮದೇವಿ ಸಮುದಾಯ ಭವನದಲ್ಲಿ ಜೂ.14 ರಂದು ಬೆಳಗ್ಗೆ 10 ಗಂಟೆಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕೆಯಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷ ಉಮೇಶ ಬಾಂಗಿ ಹೇಳಿದರು.

ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಖಂಡಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಭಾಗವಹಿಸಲಿದ್ದಾರೆ ಎಂದರು.

ಜೂ.12 ರೊಳಗಾಗಿ ಶರಣ ಚೇತನ ಸಹಕಾರಿ ಬ್ಯಾಂಕ್ ಹಾಗೂ ಬಸವೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಗುರು ಬಸವ ಸೌಹಾರ್ದ ಬ್ಯಾಂಕಿನಲ್ಲಿ ಶಾಲಾ ಅಂಕಪಟ್ಟಿ, ಆಧಾರ ಪ್ರತಿ ಹಾಗೂ ಫೋಟೋ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9741355230, 9972526450, 9448204055, 9880462258, 9611595226, 7204681947 ಸಂಪರ್ಕಿಸಲು ತಿಳಿಸಿದ್ದಾರೆ.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉಪಾಧ್ಯಕ್ಷ ಎಸ್.ಎಸ್. ಕಂಕಣವಾಡಿ, ಪ್ರಧಾನ ಕಾರ್ಯದರ್ಶಿ ಎಂ.ಆರ್. ಜಿರಲಿ, ಸಹ ಕಾರ್ಯದರ್ಶಿ ಬಸವರಾಜ ನರಗುಂದ, ಸ.ಕಾರ್ಯದರ್ಶಿ ಎಂ.ವಿ. ಕಲ್ಯಾಣಶೆಟ್ಟಿ, ಖಜಾಂಚಿ ಎಸ್.ಎಂ. ಕುರಿ, ಜಿ.ಆರ್. ಅನಂತಪುರ, ಮಲ್ಲಪ್ಪ ಮುದಕನ್ನವರ, ಸಂಗಮೇಶ ಹಲವಾಯಿ, ಮಲ್ಲಪ್ಪ ಜೈನಾಪುರ, ಎಸ್.ಎಂ. ಮಹಾಬಳಶೆಟ್ಟಿ, ಶಂಕರ ಜಿರಲಿ, ಪಿ.ಎಸ್.ಕಲ್ಯಾಣಶೆಟ್ಟಿ, ರಮೇಶ ಉಪ್ಪಿನ, ಎಸ್.ಬಿ.ಗೊಂದಿ, ಎಮ್.ಆರ್.ಇಂಗಳಗಾಂವಿ, ಎಮ್.ಎಸ್.ಕುರಿ, ಬಸವರಾಜ ಹರಕಂಗಿ, ಸಂತೋಷ ಚನಾಳ, ಗಿರೀಶ ಬಟಕುರ್ಕಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net