ಬಣಜಿಗ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

Jagadish Shetter
Published on

ಸಂಶಿ: ಬಣಜಿಗ ಸಮಾಜ ಸಂಘಟಿತವಾಗಿದೆ. ಲಿಂಗಾಯತ ಜೀವಿತ ಸಮಾಜ ಒಂದೇ ಎಂಬ ಧ್ಯೇಯವಾಕ್ಯದ ಮೂಲಕ ಉಪ ಪಂಗಡಗಳಲ್ಲಿ ಹಿಂದುಳಿಯದೆ, ಇತರೆ ಸಮಾಜದೊಂದಿಗೆ ಸಂಘರ್ಷ ಮಾಡದೆ ಆರ್ಥಿಕವಾಗಿ ಸದೃಢವಾಗಿ ಸಂಬಂಧ ಬೆಳೆಸುವುದೇ ನಮ್ಮ ಗುರಿಯಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಸಂಶಿಯ ಶ್ರೀ ಜಗದ್ಗುರು ಫಕೀರೇಶ್ವರ ಮಠ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು, ತಾಲೂಕು ಘಟಕ ಕುಂದಗೋಳ ವತಿಯಿಂದ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ಕ್ಷೇತ್ರಕ್ಕೆ ನಮ್ಮವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಬಣಜಿಗ ಸಮಾಜದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ದತ್ತು ಪಡೆದು ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿ ಸಂಸ್ಥಾನಮಠ ಶ್ರೀ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಸಮಾಜದ ಕಳಕಳಿ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಬೆಳಕಿನ ದಾರಿ ತೋರುತ್ತಿರುವ ಇಂತಹ ಸಮಾಜ ಸೇವಾ ಸಂಘಗಳಿಗೆ ಇನ್ನಷ್ಟು ಬಲ ಸಿಗಲಿ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಕೀರೇಶ ಮ. ಕೋರಿ ವಹಿಸಿದ್ದರು. ಪ್ರಸ್ತಕ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅಥಿತಿಗಳಾಗಿ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆಎಲ್​ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಎಂಎಲ್​ಸಿ ಎಸ್. ವಿ. ಸಂಕನೂರ, ಡಾ. ಈಶ್ವರ ಹಸಬಿ, ಚನ್ನಬಸವ ವಿ. ಬೆಳ್ಳಟ್ಟಿ, ವಿರೂಪಾಕ್ಷಪ್ಪ ಅಂಗಡಿ, ಮಹಾಂತೇಶ ಹತ್ತಿ, ಹನುಮಂತಪ್ಪ ಮಡಿವಾಳರ, ಮತ್ತಿತರರು ಇದ್ದರು

ಫಕೀರೇಶ ಕೋರಿ , ಸಂಚಿನ ಬಂಡಿವಾಡ, ಅಶೋಕ ಕಜ್ಜಿ, ನಾಗರಾಜ ಬೂದಿಹಾಳ, ಶಿವಾನಂದ ಹತ್ತಿ, ಶಂಭುಲಿಂಗ ಹಸಬಿ, ರೇವಪ್ಪ ಅಂಗಡಿ, ಜಯಪ್ರಕಾಶ ಗೋಣಿ, ಬಿ.ಎಸ್. ಬಿಕ್ಕದಕಟ್ಟಿ, ರಾಜು ಅಂಗಡಿ, ಪರಶುರಾಮ ಬೆಳ್ಳಟ್ಟಿ, ಮಹೇಶ ಹುರಕಡ್ಲಿ, ರೇವಪ್ಪ ಅಂಗಡಿ, ಸೇರಿದಂತೆ ಬಣಜಿಗ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net