ಬಣಜಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ

IMG_20230919_204228_571-2.jpg
Published on

ಹುಬ್ಬಳ್ಳಿ: ಎಲ್ಲರ ಭಾವನೆ ಅರ್ಥ ಮಾಡಿಕೊಳ್ಳುವ ಜತೆಗೆ ಅವರ ಒಡನಾಡಿಗಳಾಗಿ ಬೆರೆಯುವ ವ್ಯಕ್ತಿತ್ವ ಇದ್ದವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಎಂದು ಬಂಡಿವಾಡ ಗಿರೀಶ ಆಶ್ರಮದ ಡಾ. ಎ.ಸಿ. ವಾಲಿ ಮಹಾರಾಜರು ಹೇಳಿದರು.

ತಾಲೂಕು ಬಣಜಿಗ ಕ್ಷೇಮಾಭಿವದ್ಧಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತಾಡಿದರು.

ಬಣಜಿಗ ಸಮಾಜದವರಿಗೆ ಜನರ ಮನಸ್ಸು ಅರಳಿಸುವ ಶಕ್ತಿ ಇರುವುದರಿಂದ ಮುಂಚೂಣಿಯಲ್ಲಿದ್ದಾರೆ ಎಂದರು.

ಸಂಘದ ತಾಲೂಕು ಅಧ್ಯಕ್ಷ ಆನಂದ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿಗಳಾದ ವಿಜಯಕುಮಾರ ಶೆಟ್ಟರ, ವಿರೇಂದ್ರ ಕೌಜಲಗಿ, ನಿವೃತ್ತ ಲೋಕಾಯುಕ್ತ ಎಸ್ಪಿ ವಿಜಯಕುಮಾರ ಬಿಸನಳ್ಳಿ, ಶಿವಣ್ಣ ಅಂಗಡಿ, ವೀರಣ್ಣ ಮಳಗಿ, ಎಂ.ಎಂ. ಅಗಡಿ, ಅಣ್ಣಪ್ಪ ಬಾಗಿ, ಶೇಖರ ಕವಳಿ, ಅರುಣಕುಮಾರ ಶೀಲವಂತರ, ಮಹಾಜನ ಶೆಟ್ಟರ, ಸವಡಿ ಇತರರು ಮಾತನಾಡಿದರು.

ಸೌಂದರ್ಯ ನೀಲಾಕರಿ, ಸಂದೇಶ ಅಕ್ಕಿ, ರೂಪಾ ಜಿನವಾರ ಹಾಗೂ ಹೆಚ್ಚು ಅಂಕ ಪಡೆದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾಥಿರ್ಗಳನ್ನು ಸತ್ಕರಿಸಲಾಯಿತು.

ಕಾರ್ಯದರ್ಶಿ ವಿರೂಪಾ ಬಿಸರಳ್ಳಿ, ಅಶೋಕ ಹೊಸಕೇರಿ, ರಾಜಶೇಖರ ಬತ್ಲಿ, ಎಸ್.ಎ. ಲೆ$್ಮಶ್ವರ, ಕ್ಕೀರಪ್ಪ ಅಕ್ಕಿ, ಶಾಂತಪ್ಪ ಶೆಟ್ಟರ, ಅಜ್ಜಪ್ಪ ಬೆಂಡಿಗೇರಿ ಇತರರು ಇದ್ದರು.

ಚನ್ನಬಸಪ್ಪ ಧಾರವಾಡಶೆಟ್ಟರ ಸ್ವಾಗತಿಸಿದರು. ಬಸವರಾಜ ಯಕಲಾಸಪುರ, ಸಿದ್ದಲಿಂಗೇಶ ಅಂಕಲಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಅಕ್ಕೂರ ನಿರೂಪಿಸಿದರು. ರಾಜು ಶೆಟ್ಟರ
ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net