ತೆರಿಗೆ ವಂಚಿಸುವ ಟ್ಯಾಕ್ಸಿಗಳ ನಿಷೇಧಿಸಿ

msk nagraj
ನಾಗರಾಜ ಚಿಗರಿ
Published on

ಮಸ್ಕಿ: ತಾಲೂಕಿನಲ್ಲಿ ಬಹುತೇಕ ವೈಟ್ ಬೋರ್ಡ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲಾಗುತ್ತಿದೆ. ಆದ್ದರಿಂದ ವೈಟ್‌ಬೋರ್ಡ್ ಟ್ಯಾಕ್ಸಿಗಳಿಗೆ ನಿಷೇಧ ಹೇರಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಟ್ರೇಡ್ ಯೂನಿಯನ್ ತಾಲೂಕು ಅಧ್ಯಕ್ಷ ನಾಗರಾಜ ಚಿಗರಿ ಒತ್ತಾಯಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮದ ಆಯುಕ್ತರು ವೈಟ್‌ಬೋರ್ಡ್ ವಾಹನಗಳು ಬಾಡಿಗೆ ಹೋಗಲು ಅನುಮತಿ ಇಲ್ಲ. ಒಂದು ವೇಳೆ ಬಾಡಿಗೆ ಓಡಿಸಿದ್ದು ದೃಢಪಟ್ಟರೆ ಕಾನೂನು ರೀತಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.

ಆದರೆ, ವೈಟ್ ಬೋರ್ಡ್ ಮಾಲೀಕರು ಕಾರ್‌ಗಳನ್ನು ರಾಜಾರೋಷವಾಗಿ ಟ್ಯಾಕ್ಸಿ ನಿಲ್ದಾಣದಲ್ಲಿ ನಿಲ್ಲಿಸಿ ಬಾಡಿಗೆ ಹೋಗುತ್ತಿದ್ದು, ಹಳದಿ ಬೋರ್ಡ್ ಮಾಲೀಕರು ತೆರಿಗೆ ಕಟ್ಟಿ ನಷ್ಟ ಅನುಭವಿಸುತ್ತಿದ್ದಾರೆ.

ವೈಟ್‌ಬೋರ್ಡ್ ವಾಹನಗಳ ಮಾಲೀಕರು ಹಳದಿ ಬೋರ್ಡ್ ಮಾಡಿಸಿಕೊಂಡು ಬಾಡಿಗೆ ಓಡಿಸಿದರೆ ನಮ್ಮ ತಕರಾರು ಇಲ್ಲ. ಆದರೆ, ವೈಟ್‌ಬೋರ್ಡ್ ಹಾಕಿಕೊಂಡು ಬಾಡಿಗೆ ಹೋಗುವುದು ಯಾವ ನ್ಯಾಯ? ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಕರ್ನಾಟಕ ಟ್ಯಾಕ್ಸಿ ಡ್ರೈವರ್ ಟ್ರೇಡ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ವಿ.ಶ್ರೀನಿವಾಸ ಹಾಗೂ ಮಲ್ಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net