ಸಮುದ್ರ ತೀರದಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಿ

16ANKOLA2- SAND
Published on

ಅಂಕೋಲಾ: ತಾಲೂಕಿನ ಕೆಳಗಿನ ಮಂಜಗುಣಿಯಲ್ಲಿ ಸಮುದ್ರ ತೀರದಲ್ಲಿ ಮರಳನ್ನು ತೆಗೆದು ರೀಕ್ಷಾ ಮೇಲೆ ಸಾಗಾಟ ಮಾಡುವುದರಿಂದ ಮರಳುಗಾರಿಕೆ ನಡೆಸಿದ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಂಡ ಬಿಳುತ್ತಿವೆ. ಇದರಿಂದಾಗಿ ಹೊಂಡಗಳಲ್ಲಿ ಸಮುದ್ರ ನೀರು ಆವರಿಸಿಕೊಂಡು ಕಡಲ ಕೊರತೆಯಿಂದ ಅಪಾಯಕ್ಕೊಳಗಾಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮರಳುಗಾರಿಕೆ ತಪ್ಪಿಸಿಬೇಕೆಂದು ತಹಸೀಲ್ದಾರರಿಗೆ ಮತ್ತು ಪೊಲೀಸ್ ಇನ್ಸ್​ಪೆಕ್ಟರ್​ಗೆ ಸೋಮವಾರ ಸ್ಥಳೀಯರು ಮನವಿ ಸಲ್ಲಿಸಿದರು.

ಮನವಿಯಲ್ಲಿ ತಿಳಿಸಿದಂತೆ ಮರಳನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಡೆದು ಕಾನೂನು ಕ್ರಮಕೈಗೊಳ್ಳಬೇಕು. ಈ ಭಾಗದಲ್ಲಿ ಅಕ್ರಮ ಮರಳು ದಂಧೆಕೋರರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಪೊಲೀಸ್ ಬೀಟ್ ವ್ಯವಸ್ಥೆ ನಿದ್ದೆಗೆ ಜಾರಿದೆ. ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣ ಜಾಗೃತರಾಗಿ ಕಾನೂನು ಕ್ರಮಕೈಗೊಳ್ಳಬೇಕೆಂದು ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘ ಒತ್ತಾಯಿಸಿದೆ.

ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ ವಿ. ತಾಂಡೇಲ್, ಉಪಾಧ್ಯಕ್ಷ ಕೃಷ್ಣ ತಾಂಡೇಲ್, ಕಾರ್ಯದರ್ಶಿ ಅಕ್ಷಯ ತಾಂಡೇಲ್, ಸಹ ಕಾರ್ಯದರ್ಶಿ ರಾಜು ಡಿ. ತಾಂಡೇಲ್, ಸದಸ್ಯರಾದ ಸುದರ್ಶನ ತಾಂಡೇಲ್, ದೇವಿದಾಸ ತಾಂಡೇಲ್, ದತ್ತಾ ತಾಂಡೇಲ್, ಮನೋಹರ ತಾಂಡೇಲ್, ಸಂದೀಪ ತಾಂಡೇಲ್, ಶಾಂತರಾಮ ತಾಂಡೇಲ್, ಗಣಪತಿ ತಾಂಡೇಲ್, ಬಾಲಕೃಷ್ಣ ತಾಂಡೇಲ್, ಪುಂಡಲೀಕ ತಾಂಡೇಲ್, ಸಂತೋಷ ತಾಂಡೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net