

ಗ್ರಾಮ ಪಂಚಾಯಿತಿ ಉಪಚುನಾವಣೆ 2023ರ ಮತದಾನದ ಹಿನ್ನೆಲೆ ಜುಲೈ 23 ರಂದು ಮೈಸೂರು ಜಿಲ್ಲೆಯ ಅನೇಕ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಹಾಗೂ ದೇವರಾಯಶೆಟ್ಟಿ, ನರಸೀಪುರ ತಾಲೂಕಿನ ಹೆಮ್ಮಿಗೆ ಹುಣಸೂರು ತಾಲೂಕಿನ ಜಾಬಗೆರೆ, ತಟ್ಟೆಕೆರೆ, ಕಡೆ ಮನುಗನಹಳ್ಳಿ ಕೃಷ್ಣರಾಜನಗರ ತಾಲೂಕಿನ ಹಂಪಾಪುರ, ಹೆಚ್ ಡಿ ಕೋಟೆ ತಾಲೂಕಿನ ಮಾದಾಪುರ ಹಾಗೂ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜುಲೈ 22 ರ ಮಧ್ಯರಾತ್ರಿ 12 ಗಂಟೆಯಿoದ ಜುಲೈ 23 ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ವಿಧದ ಮದ್ಯ ತಯಾರಿಕೆ, ಮಾರಾಟ, ಶೇಖರಣೆ ಹಾಗೂ ಅನಧಿಕೃತ ಸಾಗಾಣಿಕೆಯನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.