ಕುದುರೆಮುಖ ಚಾರಣ ನಿಷೇಧ ತೆರವು

trackking
ಕುದುರೆಮುಖ ಶಿಖರ.
Published on

ಕಳಸ: ಹದಿನೈದು ದಿನಗಳಿಂದ ಕುದುರೆಮುಖ ಪ್ರದೇಶದ ಚಾರಣ ನಿಷೇಧಿಸಿದ್ದ ಅರಣ್ಯ ಇಲಾಖೆ ಗುರುವಾರ ತೆರವುಗೊಳಿಸಿದೆ.

ಕುದುರೆಮುಖ ಪ್ರದೇಶದಲ್ಲಿ ಚಾರಣಕ್ಕೆ ಪ್ರಸಿದ್ಧಿಯಾದ ಕುದುರೆಮುಖ ಶಿಖರ, ನೇತ್ರಾವತಿ, ಕುರುಂಜಲ್ ಗುಡ್ಡ, ಗಂಗಡಿಕಲ್ಲು ಮುಂತಾದ ಪ್ರದೇಶಗಳಲ್ಲಿ ಹದಿನೈದು ದಿನಗಳಿಂದ ಪ್ರವಾಸಿಗರಿಗೆ ಚಾರಣ ನಿಷೇಧಗೊಳಿಸಿತ್ತು. ಪ್ರವಾಸೋದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿತ್ತು.
ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಹೋಂ ಸ್ಟೇಗಳು, 30ಕ್ಕೂ ಹೆಚ್ಚು ಜೀಪ್ ಪಿಕಪ್‌ಗಳಿವೆ. ಪ್ರವಾಸಿಗರನ್ನು ಕರೆದುಕೊಂಡು ಹೋಗುವ 50ಕ್ಕೂ ಹೆಚ್ಚು ಗೈಡ್‌ಗಳು, 15ಕ್ಕೂ ಹೆಚ್ಚು ಮಲೆನಾಡು ಉತ್ಪನ್ನದ ಅಂಗಡಿ ಮಳಿಗೆಗಳು, 10ಕ್ಕೂ ಹೆಚ್ಚು ಹೋಟೇಲ್‌ಗಳಿವೆ. ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ನಂಬಿ 200ಕ್ಕೂ ಹೆಚ್ಚು ಕುಟುಂಬಗಳು ಜೀವನ ಮಾಡುತ್ತಿವೆ. ಆದರೆ ಅರಣ್ಯ ಇಲಾಖೆ ಚಾರಣ ನಿಷೇಧ ಮಾಡಿದ್ದರಿಂದ ಇವರೆಲ್ಲರೂ ನಷ್ಟ ಅನುಭವಿಸುತ್ತಿದ್ದರು. ಆದರೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಚಾರಣ ನಿಷೇಧಿಸಲಾಗಿತ್ತು. ಮಳೆ ಸ್ಥಿತಿ ನೋಡಿಕೊಂಡು ಚಾರಣಕ್ಕೆ ಅವಕಾಶ ನೀಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಈ ಕುರಿತು ಆ.6ರ ವಿಜಯವಾಣಿ ಪತ್ರಿಕೆಯಲ್ಲಿ ‘ಕುದುರೆಮುಖ ಚಾರಣ ನಿಷೇಧ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.
ಈಗ ಕುದುರೆಮುಖ ಚಾರಣ ನಿಷೇಧ ತೆರವುಗೊಳಿಸಿದ್ದರಿಂದ ಪ್ರವಾಸಿಗರು, ಹೋಂ ಸ್ಟೇ, ಜೀಪ್ ಮಾಲೀಕರು ಸಂತಸಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net