ಸರಕಾರದ ಆದೇಶದಂತೆ ಶ್ರೀ ದೇವರ ದರ್ಶನ, ಸೇವಾಧಿಗಳು, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ವಿಶೇಷ ಉತ್ಸವಗಳನ್ನು ನಿರ್ಬಂಧಿಸಿದೆ. ದೇವಳದ ವಸತಿ ಗೃಹ, ಅತಿಥಿ ಗೃಹಗಳನ್ನು ಭಕ್ತರಿಗೆ ನೀಡಲಾಗುವುದಿಲ್ಲ. ಆದರೆ ಸಂಪ್ರದಾಯ ಪ್ರಕಾರ ದಿನಂಪ್ರತಿ ನಡೆಯುವ ವೈದಿಕ ವಿಧಾನಗಳು, ಪಂಚಪರ್ವ ಉತ್ಸವಗಳು ಅರ್ಚಕರ ನೇತೃತ್ವದಲ್ಲಿ ನಡೆಯಲಿದೆ. ಸಂಬಂಧಪಟ್ಟ ಸಿಬ್ಬಂದಿ ಮಾತ್ರ ಭಾಗವಹಿಸಬಹುದು. ಸಾರ್ವಜನಿಕ ಭಕ್ತರಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.