ಉಂಡ ಮನೆಗೆ ದ್ರೋಹ ಬಗೆದಿದ್ದಾರೆ ಬಮುಲ್​ ನಿರ್ದೇಶಕ

Untitled-2
ದೊಡ್ಡಬಳ್ಳಾಪುರದ ಕಾಂಗ್ರೆಸ್​ ಕಚೇರಿಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು. ಕಾಂಗ್ರೆಸ್​ ಗ್ರಾಮಾಂತರ ಬ್ಲಾಕ್​ ಅಧ್ಯಕ್ಷ ಎಂ.ಬೈರೇಗೌಡ, ನಗರ ಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್​, ಮಹಿಳಾ ಟಕದ ಜಿಲ್ಲಾಧ್ಯೆ ರೇವತಿ, ನಗರಸಭಾ ಸದಸ್ಯ ಅಲ್ತಾಫ್​, ಆಂಜಿನ ಮೂರ್ತಿ, ಶರತ್​, ನಾರಾಯಣ್​, ಜವಾಜಿ ರಾಜೇಶ್​, ಮಂಜುನಾಥ್​ ಇದ್ದರು.
Published on

ದೊಡ್ಡಬಳ್ಳಾಪುರ : ಬಮುಲ್​ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ನಿರ್ದೇಶಕ ಬಿ.ಸಿ.ಆನಂದಕುಮಾರ್​ ಉಂಡ ಮನೆಗೆ ದ್ರೋಹ ಬಗೆದು, ಈಗ ನಮ್ಮನ್ನೇ ನಿಂದಿಸುತ್ತಿದ್ದಾರೆ. ಅವರು ಹಿಂದೆ ಅನುಭವಿಸಿದ್ದ ಹುದ್ದೆಗಳು ಕಾಂಗ್ರೆಸ್​ ನೀಡಿದ್ದ ಭಿೆ. ಇದನ್ನು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಕಾಂಗ್ರೆಸ್​ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಬಮುಲ್​ ನಿರ್ದೇಶಕರ ಸ್ಥಾನಕ್ಕೆ ನನ್ನ ಸಹೋದರ ರಾಮಣ್ಣ ಸಹ ಆಕಾಂಯಾಗಿ, ಸ್ಪರ್ಧಿಸಲು ಸಿದ್ಧರಾಗಿದ್ದರು. ಆಗ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ನನ್ನ ಸಹೋದರನ ಬದಲು ಕಾಂಗ್ರೆಸ್​ನಿಂದ ಬಿ.ಸಿ.ಆನಂದಕುಮಾರ್​ ಅವರನ್ನು ಅಖಾಡಕ್ಕೆ ಇಳಿಸಿ ಗೆಲ್ಲಿಸಿದ್ದೆವು. ಕೆಎಂಎಫ್​ ನಿರ್ದೇಶಕರನ್ನಾಗಿ ಮಾಡಿದೆವು. ಆನಂದಕುಮಾರ್​ ಅವರ ಪತ್ನಿಗೆ ಜಿಲ್ಲಾ ಪಂಚಾಯಿತಿ ಟಿಕೆಟ್​ ನೀಡಿ ಗೆಲ್ಲಲು ಶ್ರಮಿಸಿದ್ದೆವು. ಇಷ್ಟೆಲ್ಲಾ ಅಧಿಕಾರ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆದಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಜಿ.ಲ್ಮಪತಿ ಮಾತನಾಡಿ, ಆನಂದಕುಮಾರ್​ ಅವರು ಕಾಂಗ್ರೆಸ್​ ಮಾಜಿ ಶಾಸಕರನ್ನು ತೆಗಳಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅವರ ಈ ದ್ವಂದ್ವ ನಿಲುವಿನಿಂದಾಗಿ ಅವರು ಯಾವ ಪಕ್ಷದಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅವರಿಗೆ ಹೈಕಮಾಂಡ್​ ಯಾರು ಎಂದು ಜನರಿಗೆ ತಿಳಿಸಬೇಕಿದೆ ಎಂದರು.

ಕಾಂಗ್ರೆಸ್​ ಗ್ರಾಮಾಂತರ ಬ್ಲಾಕ್​ ಅಧ್ಯಕ್ಷ ಎಂ.ಬೈರೇಗೌಡ, ನಗರ ಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್​, ಮಹಿಳಾ ಟಕದ ಜಿಲ್ಲಾಧ್ಯೆ ರೇವತಿ, ನಗರಸಭಾ ಸದಸ್ಯ ಅಲ್ತಾಫ್​, ಆಂಜಿನ ಮೂರ್ತಿ, ಶರತ್​, ಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net