

ಕಲಬುರಗಿ: ಜಿಲ್ಲಾದ್ಯಂತ ರೈತರು ಬೆಳೆದ ತೊಗರಿ ನೆಟೆ ರೋಗದಿಂದ ಒಣಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಕರೆ ತೊಗರಿಗೆ ೨೫೦೦೦ ರೂ. ಪರಿಹಾರ ಕೊಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ. ಒಣಗಿದ ತೊಗರಿಗೆ ಬೆಳೆ ವಿಮೆ ಮಂಜೂರು ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ತೊಗರಿ ಬೆಳೆ ಹಾನಿ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕ್ವಿಂಟಲ್ ತೊಗರಿಗೆ ೧೫,೦೦೦ ಬೆಂಬಲ ಬೆಲೆ ನೀಡಬೇಕು. ಕ್ವಿಂಟಾಲ್ ತೊಗರಿಗೆ ೧,೦೦೦ ರೂ. ಮುಖ್ಯಮಂತ್ರಿ ನಿಧಿಯಿಂದ ಪ್ರೋತ್ಸಾಹ ಧನ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ತೊಗರಿ ಮಂಡಳಿ ಬಲವರ್ಧನೆಗೆ ೨೫ ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.