

ಮಂಡ್ಯ: ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ನೆರವು ನೀಡುವಂತೆ ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಸದಾನಂದ ಹಾಗೂ ಹೇಮಾ ಮನವಿ ಮಾಡಿದರು.
ಮಗಳು ವಿನುತಾ ಎರಡು ವರ್ಷದಿಂದ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಈಗಾಗಲೇ ದಾನಿಗಳ ಸಹಾಯದಿಂದ ಮಗಳ ಚಿಕಿತ್ಸೆಗೆ 20 ಲಕ್ಷ ರೂ ವೆಚ್ಚ ಮಾಡಿದ್ದು, ಮತ್ತೆ ನೋವು ಕಂಡದ್ದರಿಂದ ಪರೀಕ್ಷೆ ಮಾಡಲಾಗಿ ನಾರಾಯಣ ಹೃದಯಾಲಯದ ವೈದ್ಯರು ಮರು ಶಾಸ್ತ್ರ ಚಿಕಿತ್ಸೆಗೆ ಒಳ ಪಡಿಸುವಂತೆ ಹೇಳಿದ್ದಾರೆ. ಇದಕ್ಕೆ ಸುಮಾರು 2 ಲಕ್ಷ ರೂ ಬೇಕಿದ್ದು, ದಾನಿಗಳು ಸಹಾಯಾಸ್ತ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ನೆರವು ಕೇಳಿದರು.
ಸಹಾಯ ಮಾಡಲು ಇಚ್ಛಿಸುವವರು ಹೇಮಾ ಹೆಸರಿನ ಶ್ರೀರಂಗಪಟ್ಟಣ ಬ್ರಾೃಂಚ್‌ನ ಕೆನರಾ ಬ್ಯಾಂಕ್ ಖಾತೆ 7092500101895101, ಐಎಫ್‌ಎಸ್‌ಸಿ ಸಂಖ್ಯೆ KARB0000709 ಅಥವಾ ಮೊ.ಸಂ 7090221842 ಧನ ಸಹಾಯ ಮಾಡುವಂತೆ ಕೋರಿದರು.