ಯುವಕರು ಮಾದಕ ವ್ಯಸನದಿಂದ ದೂರವಿರಲಿ

ಅರಸೀಕೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಪಿಎಸ್‌ಐ ವಿಜಯ್ ಕೃಷ್ಣ ಉದ್ಘಾಟಿಸಿದರು. ಉಪನ್ಯಾಸಕ ಎಚ್.ಪಂಪಣ್ಣ, ಪೊಲೀಸ್ ಸಿಬ್ಬಂದಿ ರವಿನಾಯ್ಕ, ಪೂರ್ಯಾನಾಯ್ಕ, ವಿಷ್ಣುನಾಯ್ಕ, ದೇವೇಂದ್ರ ನಾಯ್ಕ, ಸೋಮಣ್ಣ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹರಪನಹಳ್ಳಿ ಅರಸೀಕೆರೆ ಮಾದಕ ದ್ರವ್ಯ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ
  • Harapanahalli Arasikere Anti-Drug and Illicit Trafficking Day
ಹರಪನಹಳ್ಳಿ: ಪ್ರಸ್ತುತ ದಿನಗಳಲ್ಲಿ ಯುವಜನತೆ ಮಾದಕ ವ್ಯಸನದ ದಾಸರಾಗಿ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ಬೇಸರದ ಸಂಗತಿ ಎಂದು ಪಿಎಸ್‌ಐ ವಿಜಯ್ ಕೃಷ್ಣ ತಿಳಿಸಿದರು.
ಅರಸೀಕೆರೆ ಹಿಕ್ಕಿಮಗೇರಿ ಅಜ್ಜಪ್ಪ ಹಾಲಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಲೀಸ್ ಇಲಾಖೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾದಕ ವ್ಯಸನದಿಂದ ದೂರವಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಗೌರವಯುತ ಜೀವನ ನಡೆಸಿದರೆ ಬದುಕು ಸುಂದರವಾಗಿರುತ್ತದೆ. ಮೊಬೈಲ್‌ನಿಂದ ವಿದ್ಯಾರ್ಥಿಗಳು ಸಾಕಷ್ಟು ಹಾಳಾಗುತ್ತಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಬೇರೆಡೆ ಚಿತ್ತ ಹರಿಸದೆ, ಮನೆಯ ಪರಿಸ್ಥಿತಿ, ತಂದೆ-ತಾಯಿ ಕಷ್ಟ ಅರಿತು ಓದಿನತ್ತ ಹೆಚ್ಚು ಸಮಯ ಕಳೆದರೆ ಭವಿಷ್ಯದ ಜೀವನ ಸಂತೃಪ್ತಿಯಿಂದ ಕೂಡಿರುತ್ತದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net