ಕಾಲೇಜು ಪ್ರಾಂಶುಪಾಲ ಅನಿಲ್ ಕುಮಾರ್ ಮಾತನಾಡಿ, ಯೋಗ ಎನ್ನುವುದು ಕೇವಲ ಶಾರೀರಿಕ ಆಸನಗಳಿಗೆ ಸೀಮಿತವಾಗಿಲ್ಲ. ಅದು ನಮ್ಮ ಉಸಿರಾಟ, ಆಲೋಚನೆ ಮತ್ತು ಬದುಕಿನ ಶೈಲಿಯಾಗಿದೆ. ಪ್ರಕೃತಿ, ವಿಜ್ಞಾನ ಹಾಗೂ ನಮ್ಮ ಪ್ರಾಚೀನ ಸಂಸ್ಕೃತಿಯ ಅಪೂರ್ವ ಸಂಯೋಜನೆಯೇ ಯೋಗ ದಿನವಾಗಿದೆ. ಜೂನ್‌ನಿಂದ ಡಿಸೆಂಬರ್‌ವರೆಗಿನ ಆರು ತಿಂಗಳ ಕಾಲಾವಧಿಯು ಯೋಗಾಸನ, ಧ್ಯಾನ ಹಾಗೂ ಆಧ್ಯಾತ್ಮಿಕ ಸಾಧನೆಗಳನ್ನು ಆರಂಭಿಸಲು ಅತ್ಯಂತ ಶ್ರೇಷ್ಠ ಮತ್ತು ಪ್ರಶಸ್ತವಾದ ಸಮಯವಾಗಿದೆ. ಯೋಗ ದಿನ ಆಚರಣೆಗೆ 175ಕ್ಕೂ ಹೆಚ್ಚು ದೇಶಗಳು ಇದಕ್ಕೆ ಕೈಜೋಡಿಸಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ ಎಂದು ಸ್ಮರಿಸಿದರು.