ಶ್ರಮವಹಿಸಿ ಪ್ರತಿಭೆ ಗುರುತಿಸಿಕೊಳ್ಳಿ

ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಹತ್ತು ದಿನಗಳ ರಾಷ್ಟ್ರಿಯ ರಂಗಭೂಮಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ನಡೆಯಿತು. ವಿವಿ ಕುಲಸಚಿವ ಪ್ರೊ.ವಿ.ಲೋಕೇಶ್, ಪ್ರೊ.ಶಾಂತನಾಯ್ಕೊ, ಪ್ರೊ.ರಾಬರ್ಟ್ ಜೋಸ್, ಕಲಾವಿದರಾದ ಟಿ.ಕೊಟ್ರಪ್ಪ , ವೀಣಾ, ರಂಗ ನಿರ್ದೇಶಕ ಮಹೇಶ್, ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಇದ್ದರು.
ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಹತ್ತು ದಿನಗಳ ರಾಷ್ಟ್ರಿಯ ರಂಗಭೂಮಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ನಡೆಯಿತು. ವಿವಿ ಕುಲಸಚಿವ ಪ್ರೊ.ವಿ.ಲೋಕೇಶ್, ಪ್ರೊ.ಶಾಂತನಾಯ್ಕೊ, ಪ್ರೊ.ರಾಬರ್ಟ್ ಜೋಸ್, ಕಲಾವಿದರಾದ ಟಿ.ಕೊಟ್ರಪ್ಪ , ವೀಣಾ, ರಂಗ ನಿರ್ದೇಶಕ ಮಹೇಶ್, ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಾ ಪ್ರದರ್ಶನದ ವೇದಿಕೆ
  • ಹತ್ತು ದಿನಗಳ ಕಾರ್ಯಗಾರವು ಯಶಸ್ವಿ
ಬಳ್ಳಾರಿ : ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಶ್ರಮವಹಿಸಿ ಎಂದು ವಿವಿ ಕುಲಸಚಿವ ಪ್ರೊ.ವಿ.ಲೋಕೇಶ್ ಹೇಳಿದರು.
ನಗರದ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ದಿ. ರಮಣಿಕ ಗುಪ್ತ ಅವರ ಸ್ಮರಣಾರ್ಥ ಆಯೋಜಿಸಿರುವ ಹತ್ತು ದಿನಗಳ ರಾಷ್ಟ್ರಿಯ ರಂಗಭೂಮಿ ಕಾರ್ಯಾಗಾರದ ಬುಧವಾರ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳು ಪ್ರತಿಭಾ ಪ್ರದರ್ಶನದ ವೇದಿಕೆಯಾಗಿವೆ. ಜತೆಗೆ ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರೋತ್ಸಾಹಿಸುವ ದೊರೆಯುತ್ತಿದೆ. ವಿವಿಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಹತ್ತು ದಿನಗಳ ಕಾರ್ಯಗಾರವು ಯಶಸ್ವಿಯಾಗಿರುವುದು ಸಂತಸವಾಗಿದೆ ಎಂದರು.
ಎನ್‌ಎಸ್‌ಡಿ ರಂಗ ನಿರ್ದೇಶಕ ಸಾಂಬಶಿವ ದಳವಾಯಿ ಮಾತನಾಡಿ, ಪ್ರತಿಯೊಬ್ಬರು ಸಾಹಿತ್ಯದ ರಸವನ್ನು ಸವಿಯುವ ಮೂಲಕ ಗುರುತಿಸಿಕೊಳ್ಳಬೇಕು. ಹತ್ತು ದಿನಗಳಲ್ಲಿ ನಾಟಕ ತರಬೇತಿ ಹಾಗೂ ನಾಟಕ ರಚನೆ ಸುಲಭದ ಮಾತಲ್ಲ. ನಾಟಕಕ್ಕೆ ನಿರ್ದಿಷ್ಟವಾದ ಸಮಯ ಬೇಕು. ಇಂತಹ ರಂಗಭೂಮಿ ಕಾರ್ಯಾಗಾರಗಳು ಮೈಸೂರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಜಿಲ್ಲೆಯಲ್ಲಿ ಆಯೋಜಿಸಿ ಸಾಧನೆ ಮಾಡಿದೆ ಎಂದರು.
ಬಳಿಕ ಪ್ರೊ.ಶಾಂತನಾಯ್ಕೊ ಅವರ ರಚಿತ ವೇರಾಳು ನಾಟಕವನ್ನು ಪ್ರದರ್ಶನ ಮಾಡಲಾಯಿತು. ನಾಟಕ ನಿರ್ದೇಶನ, ಜನಪದ ರಂಗ, ರಂಗಭೂಮಿ ಮತ್ತು ರಂಗಶಿಕ್ಷಣ, ಬಯಲಾಟ ಮೊದಲಾದ ಮಾದರಿಯ ಹತ್ತಕ್ಕೂ ಹೆಚ್ಚು ವಿವಿಧ ಕಾರ್ಯಾಗಾರದ 10 ದಿನಗಳ ಕಾಲ ನಡೆದ 250ಕ್ಕೂ ಅಧಿಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಹಾಗೂ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net