

ಪ್ರಮುಖ ಮುಖ್ಯಾಂಶಗಳು
ಬಳ್ಳಾರಿ :
ಕರಾವಳಿಗರೂ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಜಿಲ್ಲೆಯ ಏಳಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಉಡುಪಿ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಆಯೋಜಿಸಿದ್ದ ಕರಾವಳಿ ಸಾಂಸ್ಕೃತಿಕ ಸಂಘದ ನೂತನ ಅವತರಣಿಕೆಯ ಉದ್ಘಾಟನಾ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಮೂಲದ ಜನರ ಅಭಿವೃದ್ಧಿಯಲ್ಲಿ ಜಿಲ್ಲೆಯ ಜನತೆಯ ಪಾತ್ರ ಹಿರಿದು. ಜಿಲ್ಲೆಯ ಜನರು ತೆರೆದ ಮನಸ್ಸಿನಿಂದ ಆಶ್ರಯ ನೀಡಿ ಜೀವನ ಕಟ್ಟಿಕೊಟ್ಟಿದ್ದಾರೆ. ಈ ಋಣ ನಮ್ಮೆಲ್ಲರ ಮೇಲಿದೆ ಎಂದರು.