

ಪ್ರಮುಖ ಮುಖ್ಯಾಂಶಗಳು
ಬಳ್ಳಾರಿ :
ನಗರದಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಕಳೆದ ಎರಡು ವರ್ಷದ ಹಿಂದ ಭೂಮಿಪೂಜೆ ನಡೆದರೂ ಈವರೆಗೆ ಮಾತ್ರ ಆರಂಭವಾಗಿಲ್ಲ. ಕಳೆದ ಎರಡೂ ವರ್ಷದಿಂದ ಸರ್ಕಾರದಿಂದ ಅನುದಾನಕ್ಕೆ ಅನುಮೋದನೆ ದೊರೆಯದೆ ಕಾರಣ ಕಟ್ಟಡದ ಕಾಮಗಾರಿ ನಿರ್ಮಾಣ ದಿನೇದಿನೆ ವಿಳಂಬವಾಗುತ್ತಿದೆ.
ಈ ಕಾಲೇಜ್ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಅಧೀನಕ್ಕೆ ಒಳಪಟ್ಟಿದೆ. ಬಿಎ, ಬಿ.ಕಾಂ., ಕೋರ್ಸ್‌ಗಳಿವೆ. ಕಳೆದ ವರ್ಷ 351 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರು. ಸದ್ಯ, ಪ್ರಸ್ತಕ ಸಾಲಿನಲ್ಲಿ ಬಿಎಸ್ಸಿ ಸೇರಿದಂತೆ ಕೆಲವೊಂದು ಹೊಸ ಕೋರ್ಸ್‌ಗಳ ಆರಂಭಗೊಂಡಿರುವುದರಿಂದ ಪ್ರಸ್ತುತ 461 ವಿದ್ಯಾರ್ಥಿನಿಯರಿಗೆ ಹೆಚ್ಚಿದೆ. ಐದು ಜನ ಕಾಯಂ ಪ್ರಾಧ್ಯಾಪಕರು ಹಾಗೂ 15 ಜನ ಅತಿಥಿ ಉಪನ್ಯಾಸಕರು ಇದ್ದಾರೆ.
ವರ್ಷದಿಂದ ವರ್ಷಕ್ಕೆ ಕಾಲೇಜಿ ದಾಖಲಾತಿ ಹೆಚ್ಚಿಸಲು ಸಿಬ್ಬಂದಿ ಸಕ್ರಿಯ ತೊಡಗಿದ್ದಾರೆ. ಜಿಲ್ಲೆ ಸೇರಿದಂತೆ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂಡ ಪ್ರತಿಷ್ಟಿತ ಖಾಸಗಿ ಕಾಲೇಜುಗಳಿವೆ. ಪ್ರತಿ ಖಾಸಗಿ ಕಾಲೇಜುಗಳು ದಾಖಲಾತಿ ಹೆಚ್ಚಿಸಿಕೊಳ್ಳಲು ಒಂದರ ಮೇಲೆ ಒಂದರಂತೆ ಪೈಪೋಟಿಗೆ ಇಳಿಯುತ್ತವೆ. ಆದರೆ, ಸೌಲಭ್ಯಗಳ ಕೊರತೆ ನಡುವೆಯೂ ಒಂದೇ ವರ್ಷದಲ್ಲೇ 110 ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿಸಿಕೊಂಡಿರುವುದು ಗಮರ್ನಾಹ ಸಾಧನೆಯಾಗಿದೆ. ಸದ್ಯ, ಕಾಲೇಜು ಕಟ್ಟಡದಲ್ಲಿ ಆರು ಕೊಠಡಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚವಾಗಿರುವುದರಿಂದ ಆವರಣದಲ್ಲಿರುವ ಶಾಲೆಯ ನಾಲ್ಕು ಕೊಠಡಿಗಳಲ್ಲಿ ಬೋಧಿಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಮೆಚ್ಚುಗೆ ಕಾಲೇಜ್‌ಯಾಗಿದೆ.
ಕೋಟ್... ಈಗಾಗಲೇ ಕಾಲೇಜು ಸಿಬ್ಬಂದಿ ಸಚಿವ ಬಿ.ನಾಗೇಂದ್ರ ಅವರನ್ನು ಭೇಟಿಯಾಗಿ ಕಟ್ಟಡ ನಿರ್ಮಾಣದ ಬಗ್ಗೆಗ ಮನವಿ ಮಾಡಿದ್ದಾರೆ. ಮನವಿಗೆ ಸಚಿವರು ಸ್ಪಂದಿಸಿ, ಕೆಲ ದಿನಗಳಲ್ಲೇ ಅನುದಾನಕ್ಕೆ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ.- ಡಾ.ಕೆ.ಪ್ರಜ್ಞಾ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ, ಬಳ್ಳಾರಿ.