ಮೃತದೇಹ ಗ್ಯಾಸ್‌ನಿಂದ ಸುಟ್ಟಿದ್ದು ಏಕೆ ?

 ಜಿ.ಜನಾರ್ದನರೆಡ್ಡಿ
ಜಿ.ಜನಾರ್ದನರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಸಂಪ್ರದಾಯ
  • ನಾಶಪಡಿಸುವ
  • ಮೃತದೇಹ
ಬಳ್ಳಾರಿ : ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಯುವಕನ ದೇಹವನ್ನು ಸಾಕ್ಷೃ ನಾಶ ಸಲುವಾಗಿಯೇ ಮಣ್ಣಲ್ಲಿ ಹೂತಿಡಿದೆ, ಗ್ಯಾಸ್‌ನಿಂದ ದಹನಗೊಳಿಸಲಾಗಿದೆ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೂಗಳ ಶವಗಳನ್ನು ಕಟ್ಟಿಗೆಗಳ ಮೂಲಕ ದಹನಗೊಳಿಸುವುದು ಸಂಪ್ರದಾಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಮರಳಿ ಮರಣೋತ್ತರ ಪರೀಕ್ಷೆ ನಡೆಸಿದರೆ ಬುಲೆಟ್ ಮಾಹಿತಿ ದೊರೆಯಲಿದೆ ಎಂಬ ಉದ್ದೇಶದಿಂದ ಶವ ಹೂತಿಡಿಲು ಅಗೆದಿರುವ ಕುಣಿ ಮುಚ್ಚಿ , ಸಾಕ್ಷೃ ನಾಶಪಡಿಸುವ ಸಲುವಾಗಿ ಏಕಾಏಕಿ ಕಟ್ಟಿಗೆಗಳು ದೊರೆಯದೆ ಕಾರಣದಿಂದ ಗ್ಯಾಸ್‌ನಿಂದ ದೇಹ ಸುಡಲಾಗಿದೆ ಎಂದರು.
ರಾಜಶೇಖರನ ಮೃತದೇಹವನ್ನು ಈಗಾಗಲೇ ಸ್ಮಶಾನದಲ್ಲಿ ಹೂತಿಟ್ಟಿರುವ ಅವರ ತಂದೆಯ ಶವದ ಬಳಿ ಅಥವಾ ಕಾಲಿನ ಕೆಳ ಭಾಗದಲ್ಲಿ ಕುಣಿ ತೆಗೆಯುವಂತೆ ಕುಟುಂಬಸ್ಥರು ತಿಳಿಸಿದ್ದರು. ಅಲ್ಲದೆ, ಅಗೆದಿರುವ ಕುಣಿಯನ್ನು ಪೊಲೀಸರು ಸ್ಥಳ ಪರಿಶೀಲಿಸಿ, ವಿಡಿಯೋ ಹಾಗೂ ಫೋಟೊ ತೆಗೆದುಕೊಂಡು, ನನ್ನ ಸ್ವವಿವರ ಕೂಡ ಪಡೆದಿದ್ದರು. ಆದರೆ, ರಾಜಶೇಖರ ಸಂಬಂಧಿ ರಘು ಎಂಬುವವ ದೂರವಾಣಿ ಕರೆ ಮೂಲಕ ಶಾಸಕರು ಹೇಳಿದ್ದು, ಅಗೆದಿರುವ ಕುಣಿ ಮುಚ್ಚಬೇಕು. ಮೃತದೇಹ ಹೂಳಲ್ಲ ಸುಡುತ್ತಾರೆ ಎಂದು ಸ್ಮಶಾನದಲ್ಲಿ ಶವ ಹೂಳುವ ಸೋಮುಗೆ ಹೇಳಿರುವ ವಿಡಿಯೋವನ್ನು ಜನಾರ್ದನರೆಡ್ಡಿ ಬಿಡುಗಡೆಗೊಳಿಸಿದರು.
ಆರಂಭದಲ್ಲಿ ಶವ ಹೂತಿಡಿಲು ಗುಂಡಿ ತೆಗೆದಿದ್ದು ಏಕೆ ?. ನಂತರ ದೇಹ ಸುಡುವುದು ಏಕೆ?. ಇವೆಲ್ಲ ಪ್ರಕರಣದ ಸಾಕ್ಷೃ ನಾಶವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು. ಮದುವೆಗೂ ಮುನ್ನ ಮೃತಪಟ್ಟರೆ ದೇಹವನ್ನು ಸುಡುವುದು ಕುಟುಂಬಸ್ಥರ ಹೇಳಿಕೆ ಕೂಡ ಶಾಸಕರ ಬೆಂಬಲಿಗರ ಒತ್ತಡದಿಂದ ಕೂಡಿದೆ ಎಂದು ಆರೋಪಿಸಿದರು.
ಹೊಸದಾಗಿ ನೇಮಕೊಂಡಿರುವ ಡಿಐಜಿ, ಎಸ್ಪಿ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮಜರುಗಿಸಬೇಕು. ಅಲ್ಲದೆ, ಕೊಲೆ ಆರೋಪಿ ಗುರುಚರಣ್‌ಸಿಂಗ್ ಮಾತ್ರ ಬಂಧಿಸಿದ್ದು, ಇನ್ನೂ ಉಳಿದ ನಾಲ್ವರು ಗನ್‌ಮ್ಯಾನ್‌ಗಳು, ಶಾಸಕ ಭರತ್‌ರೆಡ್ಡಿ, ಅಪ್ತ ಸತೀಶ್‌ರೆಡ್ಡಿಯನ್ನು ಬಂಧಿಸಬೇಕು. ಇದರ ಬಗ್ಗೆ ಬೆಂಗಳೂರಿನ ಕೋರ್ಟ್‌ನಲ್ಲಿ ಪ್ರತ್ಯೇಕ ದೂರು ದಾಖಲಿಸುವೆ ಎಂದರು.
ಕೋಟ್.. ಸದ್ಯ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಈಗಾಗಲೇ ವಿಚಾರಣೆ ನಡೆಸಿರುವ ಪೊಲೀಸರ ಜತೆ ಮಾಹಿತಿ ಪಡೆದಿರುವೆ. ತನಿಖೆ ಹಂತದಲ್ಲಿದ್ದು ಈ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲು ಕ್ರಮವಹಿಸಲಾಗುವುದು.
- ಸುಮನ್ ಡಿ.ಪನ್ನೇಕರ್, ಎಸ್ಪಿ, ಬಳ್ಳಾರಿ
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net