ಇನ್ನೂ ಸಂಡೂರು ಶಾಸಕಿ ಈ. ಅನ್ನಪೂರ್ಣ ಮೊದಲ ಬಾರಿಗೆ ಗೆದ್ದಿದ್ದರು. ಅವರ ಪತಿ , ಸಂಸದ ಈ. ತುಕಾರಾಮ್ ಸತತ ನಾಲ್ಕು ಬಾರಿ ಶಾಸಕರಾಗಿದ್ದರೆ. ಮಹಿಳಾ ಕೋಟಾದಲ್ಲಿ ಸಚಿವ ಸ್ಥಾನ ನೀಡಿ ಎಂಬುದಾಗಿ ನಾಯಕರ ಮುಂದೆ ಲಾಬಿ ನಡೆಸಿದ್ದರು. ಇನ್ನೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಿರಗುಪ್ಪ ಶಾಸಕ ಬಿ.ಎಂ.ನಾಗರಾಜ ಎರಡನೇ ಬಾರಿಗೆ ಶಾಸಕರಾದರೂ ಬಾಹ್ಯವಾಗಿ ಎಲ್ಲಿಯೂ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿಲ್ಲ. ಆದರೆ, ಕೆಲ ಪ್ರಭಾವಿ ನಾಯಕರ ಮೂಲಕ ಯುವ ಶಾಸಕರಿಗೆ ಸಚಿವ ಸ್ಥಾನ ಕೋಟಾದಲ್ಲಿ ನೀಡಿ ಎಂಬುದಾಗಿ ಚರ್ಚಿಸಿದ್ದರು ಎನ್ನಲಾಗಿದೆ.