ಇಲ್ಲಿನ ಶ್ರೀರಾಂಪುರ ಕಾಲನಿಯ ಶ್ರೀರಾಮ ದೇವಸ್ಥಾನ ಮುಂಭಾಗದಲ್ಲಿ ಸತ್ಯನಾರಾಯಣ ಪೇಟೆಯ ಉಪನಗರ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ವಿರಾಟ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಚರ್ಚ್ ಮತ್ತು ಮಸೀದಿಗಳು ಕಟ್ಟಿಕೊಳ್ಳಲಿ. ಆದರೆ, ಹಿಂದೂಗಳ ದೇವಸ್ಥಾನದ ತಂಟಗೆ ಬಂದರೆ ಸುಮ್ಮನೆ ಕೂರುವುದಿಲ್ಲ. ಮಹಾರಾಷ್ಟ್ರದಲ್ಲಿ ಎಐಯಂಐಯಂ ಪಕ್ಷದಿಂದ ಗೆದ್ದಿರುವ ಪಾಲಿಕೆಯ ಸದಸ್ಯೆಯೊಬ್ಬರು ಇಡಿ ಕ್ಷೇತ್ರವನ್ನು ಇಸ್ಲಾಮೀಕರಣ ಮಾಡುತ್ತೇನೆ. ಅವರ ಪಕ್ಷದ ಮಹಾನಾಯಕ ಮುಂದೆ ಒಂದು ದಿನ ಹಿಜಾಬ್ ಹಾಕಿರುವ ಮಹಿಳೆಯೊಬ್ಬಳು ಈ ದೇಶದ ಪ್ರಧಾನ ಮಂತ್ರಿಯಾಗುತ್ತಾಳೆ ಎಂಬ ಹೇಳಿಕೆ ನೀಡುತ್ತಾರೆ. ಆದರೆ, ಒಂದು ಕಾಲದಲ್ಲಿ ನಮ್ಮದೇ ಭಾಗವಾಗಿದ್ದ ಬಾಂಗ್ಲಾದೇಶದಲ್ಲಿ ಅವರದೆ ಸಮಾಜದ ಮಹಿಳೆ ಪ್ರಧಾನಮಂತ್ರಿಯಾಗಿದ್ದರು. ಅವರನ್ನು ಏಕೆ ಅಲ್ಲಿಂದ ಓಡಿಸಲಾಯಿತು. ಈ ದೇಶದಲ್ಲಿ ಸಾಧು ಸಂತರು ಇರುವವರೆಗೆ ಹಿಂದೂಗಳಿಗೆ ಏನು ತೊಂದರೆ ಬರದಂತೆ ಕಾಪಾಡಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಮ್ಮೇಳನ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ, ಸತ್ಯನಾರಾಯಣ ಪೇಟೆಯ ಉಪನಗರ ಸಮಿತಿ ಅಧ್ಯಕ್ಷ ನರಹರಿ ಪ್ರಸಾದ್ ಇದ್ದರು.