ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ ಮನೆಗೆ ಉಪಹಾರಕ್ಕೆ ಹೋದರೆ ತಪ್ಪೇನಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರಶ್ನಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಬಿಜೆಪಿ ಅಥವಾ ಜೆಡಿಎಸ್ ಪಕ್ಷದ ನಾಯಕರ ಮನೆಗೆ ಉಪಹಾರಕ್ಕೆ ಹೋದರೆ ಮಾತ್ರ ಚರ್ಚೆಯಾಗಲಿದೆ ಹೊರತು, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಮನೆಗೆ ಹೋದರೆ ವಿಶೇಷವಿಲ್ಲ. ಈ ರೀತಿಯ ಉಪಹಾರದಲ್ಲಿ ಸಿಎಂ, ಡಿಸಿಎಂ ಜತೆ ನಾನು ಕೂಡ ಬಹಳಷ್ಟು ಬಾರಿ ಸೇರಿರುವೆ ಫೋಟೊಗಳಿವೆ. ಈ ಬ್ರೇಕ್ ಫಾಸ್ಟ್ ಇದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಗೆ ಸೀಮಿತವಾಗಿದೆ ಎಂದರು. ಸಿಎಂ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ದಕ್ಷಿಣ ಕನ್ನಡ ಹಾಗೂ ಮಂಗಳೂರು ಜಿಲ್ಲೆಗಳಿಗೆ ಭೇಟಿ ನೀಡುವುದರ ಬಗ್ಗೆ ಮಾಹಿತಿಲ್ಲ. ಶಾಸಕ ಡಾ.ಅಜಯಸಿಂಗ್ ಸಂಪುಟ ಪುನಾರಚನೆಯಾದರೆ ನಾನು ಕೂಡ ಅಕಾಂಕ್ಷಿ ಎಂಬುದಾಗಿ ತಿಳಿಸಿದ್ದು, ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸಂಪುಟ ಪುನಾರಚನೆಯಾದರೆ ನಾನು ಮತ್ತೊಮ್ಮೆ ಮಂತ್ರಿಯಾಗುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಸೇರಿದಂತೆ 140 ಶಾಸಕರು ಅಪ್ತರೆ ಆಗಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಹಾಗೂ ಶಾಸಕ ಬಿ.ನಾಗೇಂದ್ರ ಮತ್ತೋಮ್ಮೆ ಮಂತ್ರಿಯಾಗುವುದು ಸೇರಿದಂತೆ ಎಲ್ಲವೂ ಹೈಕಮಾಂಡ್ ನಾಯಕರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.