ಉತ್ತಮ ವೇತನ ಪಡೆದು ಏನು ಕಲಿಸುತ್ತಿದ್ದೀರಿ?

ಹಗರಿಬೊಮ್ಮನಹಳ್ಳಿ ತಾಪಂ ಸಭಾಂಗಣದಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ ಅಧ್ಯಕ್ಷತೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಗತಿ ಪರಿಶೀಲನೆ ಮತ್ತು ಮುಂದಿನ ಕ್ರಮ ಕುರಿತು ಸಭೆ ನಡೆಯಿತು. ತಾಪಂ ಇಒ ಪಿ.ವಿಶ್ವನಾಥ, ಪ್ರಭಾರ ಬಿಇಒ ಪ್ರಭಾಕರ ಮತ್ತಿತರರು ಇದ್ದರು.
ಹಗರಿಬೊಮ್ಮನಹಳ್ಳಿ ತಾಪಂ ಸಭಾಂಗಣದಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ ಅಧ್ಯಕ್ಷತೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಗತಿ ಪರಿಶೀಲನೆ ಮತ್ತು ಮುಂದಿನ ಕ್ರಮ ಕುರಿತು ಸಭೆ ನಡೆಯಿತು. ತಾಪಂ ಇಒ ಪಿ.ವಿಶ್ವನಾಥ, ಪ್ರಭಾರ ಬಿಇಒ ಪ್ರಭಾಕರ ಮತ್ತಿತರರು ಇದ್ದರು.
Published on
ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ಕೇವಲ ಪಾಸ್ ಆಗುವುದಾದರೆ ನಿಮ್ಮ ಸಾಧನೆ ಏನು, ವೇತನಕ್ಕೆ ತಕ್ಕಂತೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸುವವ ಮೂಲಕ ಶಾಸಕ ಕೆ.ನೇಮಿರಾಜ್ ನಾಯ್ಕ ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಗತಿ ಪರಿಶೀಲನೆ ಮತ್ತು ಮುಂದಿನ ಕ್ರಮ ಕುರಿತು ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಅನುದಾನಿತ ಸಂಸ್ಥೆಗಳ ಶಿಕ್ಷಕರು ಸಹ ಉತ್ತಮ ವೇತನ ಪಡೆಯುತ್ತಿದ್ದರೂ ನೀವು ಕಲಿಸುತ್ತಿದ್ದೀರಿ ಎಂದು ಪ್ರಶ್ನಿಸಿ ಕಳಪೆ ಫಲಿತಾಂಶ ಮುಂದುವರಿದರೆ ವೇತನ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದಾಗಿದೆ. ಶೇ.100 ಫಲಿತಾಂಶ ಎಂದು ಹೇಳಿಕೊಂಂಡು ಹೆಮ್ಮೆ ಪಡುವುದಲ್ಲ. ಗುಣಮಟ್ಟದ ಶಿಕ್ಷಣ ಮುಖ್ಯ. ಸರಿಯಾಗಿ ಬೋಧನೆ ಮಾಡದಿದ್ದರೆ ಖಾಸಗಿ ಶಾಲೆಗಳ ಅನುಮತಿ ರದ್ದುಪಡಿಸುವ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದ ನಿರ್ದೇಶನ ಮೀರಿ ಕೆಲಸ ಮಾಡಬೇಕೆಂದು ತಿಳಿಸಿದರು.
ತಾಪಂ ಇಒ ವಿಶ್ವನಾಥ, ಪ್ರಭಾರ ಬಿಇಒ ಪ್ರಭಾಕರ, ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಿಗಳಾದ ರಾಜಶೇಖರ, ಎಚ್.ಎಂ.ಹುಲಿಬಂಡಿ, ವಿಶೇಷ ಪರಿವೀಕ್ಷಕ ಸುರೇಶ, ಅಕ್ಷರ ದಾಸೋಹ ಯೋಜನೆ ಅಧಿಕಾರಿ ರಾಜಕುಮಾರ. ಉಪ ತಹಸೀಲ್ದಾರ್ ಶಿವಕುಮಾರಗೌಡ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರವಿಚಂದ್ರನಾಯ್ಕ, ಶಿಕ್ಷಣ ಸಂಯೋಜಕರಾದ ಶಿವಲಿಂಗಸ್ವಾಮಿ, ಗುರುಬಸವರಾಜ, ಪ್ರಮುಖರಾದ ರವಿನಾಯ್ಕ, ಮಂಜುನಾಥ, ಮಲ್ಲಪ್ಪ, ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net