ಹೂವಿನಹಡಗಲಿ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದರೆ ಅಪಘಾತದಲ್ಲಿ ತಲೆಗೆ ಬೀಳುವ ಪೆಟ್ಟಿನಿಂದ ಪಾರಾಗಬಹುದು ಎಂದು ಪಿಎಸ್‌ಐ ಮಣಿಕಂಠ ಹೇಳಿದರು.
ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಸಿಲಲ್ಲಿ ಹೆಲ್ಮೆಟ್ ಧರಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಸಾರ್ವಜನಿಕರಲ್ಲಿದೆ. ಹೆಲ್ಮೆಟ್ ತಲೆಗೆ ಪೆಟ್ಟು ಬೀಳದಂತೆ ತಡೆದು ಮಿದುಳು ಸಮಸ್ಯೆಯಾಗದಂತೆ ರಕ್ಷಿಸುತ್ತದೆ. ಪೊಲೀಸರಿಗಾಗಿ ಹೆಲ್ಮೆಟ್ ಧರಿಸಬೇಕು ಎಂಬ ಭಾವನೆ ಬಿಟ್ಟು ಕುಟುಂಬದವರಿಗಾಗಿ ಹೆಲ್ಮೆಟ್ ಧರಿಸಬೇಕು ಎಂಬ ಭಾವನೆ ಬೆಳೆಯಬೇಕು ಎಂದರು.
ಎಎಸ್‌ಐ ನಂದಿನಿ, ಸಿಬ್ಬಂದಿ ಗುರುಬಸವರಾಜ, ಪರಶುರಾಮ, ಕಲಂದರ್, ಪ್ರಭಣ್ಣ, ಮಲ್ಲೇಶ್ ಇತರರಿದ್ದರು.