ಹೆಲ್ಮೆಟ್‌ಧರಿಸಿ ಪ್ರಾಣಾಪಾಯದಿಂದ ಪಾರಾಗಿ

ಹರಪನಹಳ್ಳಿಯಲ್ಲಿ ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಜಾಗೃತಿ ಮೂಡಿಸಲಾಯಿತು. ಸಿಪಿಐ ಮಹಂತೇಶ್ ಸಜ್ಜನ್, ಕ್ರೈಂ ಪಿಎಸ್‌ಐ ಮೀನಾಕ್ಷಿ, ಎಎಸ್‌ಐ ಮಂಜಪ್ಪ, ಪ್ರಮುಖರಾದ ಅಂಜಿನಪ್ಪ, ಕೊಟ್ರೇಶ್, ಅಂಬರೀಶ್, ಕೊಟ್ರೇಶ್, ನಾಗರಾಜ, ವೀರೇಂದ್ರ, ಗುಡಿಹಳ್ಳಿ ಹಾಲೇಶ್, ನಂದಿಬೇವೂರು ಮುನಿಯಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಮಹಂತೇಶ್ ಸಜ್ಜನ್ ಸಲಹೆ
  • ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ
ಹರಪನಹಳ್ಳಿ: ವಾಹನ ಸವಾರರು ಹೆಲ್ಮೆಟ್ ಧರಿಸದೆ ಅಪಘಾತ ಸಂಭವಿಸಿ ಸಾವಿನ ಪ್ರಮಾಣ ಏರುತ್ತಿವೆ. ಆದ್ದರಿಂದ ಬೈಕ್‌ನಲ್ಲಿ ಚಲಿಸುವಾಗ ಹೆಲ್ಮೆಟ್‌ಧರಿಸಿದರೆ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಬಹುದು ಎಂದು ಸಿಪಿಐ ಮಹಂತೇಶ್ ಸಜ್ಜನ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೈಕ್ ಅಪಘಾತ ಸಂಭವಿಸಿ ಪ್ರಾಣಹಾನಿ ಆದರೆ ನಿಮ್ಮ ಕುಟುಂಬಕ್ಕೆ ಆಸರೆ ಇಲ್ಲದಂತಾಗುತ್ತದೆ. ಬೈಕ್ ಸವಾರರು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿ ಪ್ರಾಣ ರಕ್ಷಿಸಿಕೊಳ್ಳಬೇಕು ಎಂದರು.
ಹೆಲ್ಮೆಟ್ ಧರಿಸದೆ ಚಲಿಸುತ್ತಿದ್ದ ಬೈಕ್ ಸವಾರರಿಗೆ ರಸ್ತೆ ನಿಯಮ ಪಾಲಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಪ್ರಾಪ್ತರಿಗೆ ಬೈಕ್ ಕೋಡಬಾರದು. ಪರವಾನಗಿ ಪಡೆದು ಚಾಲನೆಗೆ ಅವಕಾಶ ನೀಡಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net