ಕಾನಹೊಸಹಳ್ಳಿ: ಭೀಮಸಮುದ್ರ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಕಲ್ಲಂಗಡಿ ಫಸಲಿನ ಮೇಲೆ ಕರಡಿಗಳು ಕಳೆದ ಒಂದು ವಾರದಿಂದ ದಾಳಿ ನಡೆಸಿ ರೈತಗೆ ನಷ್ಟ ಉಂಟು ಮಾಡಿವೆ.
ಅಟವಾಳಿಗೆ ನಾಗರಾಜ ಎರಡು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದು, ಕರಡಿಗಳು ರಾತ್ರಿ ಜಮೀನಿಗೆ ನುಗ್ಗಿ ಹಣ್ಣುಗಳನ್ನು ತಿಂದಿವೆ. ಕರಡಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ರೈತ ನಾಗರಾಜ ಬೇಸರ ವ್ಯಕ್ತಪಡಿಸಿದರು.