ಪೈಪ್‌ಲೈನ್ ಒಡೆದು ನೀರು ವ್ಯರ್ಥ

ರಾಜವಾಳ ಬಳಿ ನೀರಿನ ಯೋಜನೆಯ ಬೃಹತ್ ಪೈಪ್‌ಲೈನ್‌ಗೆ ಕಿಂಡಿ ಬಿದ್ದ ಪರಿಣಾಮ ಅಪಾರ ನೀರು ಹೊರಹೊಮ್ಮಿ ಪೋಲಾಗಿರುವುದು.
ರಾಜವಾಳ ಬಳಿ ನೀರಿನ ಯೋಜನೆಯ ಬೃಹತ್ ಪೈಪ್‌ಲೈನ್‌ಗೆ ಕಿಂಡಿ ಬಿದ್ದ ಪರಿಣಾಮ ಅಪಾರ ನೀರು ಹೊರಹೊಮ್ಮಿ ಪೋಲಾಗಿರುವುದು.
Published on
ಹೂವಿನಹಡಗಲಿ: ರಾಜವಾಳ ಸಮೀಪದಲ್ಲಿ ನಿರ್ಮಿಸಲಾಗಿರುವ ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಬೃಹತ್ ಪೈಪ್‌ಲೈನ್‌ಗೆ ಕಿಂಡಿ ಬಿದ್ದ ಪರಿಣಾಮ, ಶನಿವಾರ ಅಪಾರ ನೀರು ಪೋಲಾಗಿದೆ. ಪೈಪ್‌ಲೈನ್‌ನ ಒಂದು ಭಾಗದಲ್ಲಿ ಏಕಾಏಕಿ ಸೋರಿಕೆ ಕಾಣಿಸಿಕೊಂಡು, ಹೆಚ್ಚಿನ ಒತ್ತಡದಿಂದ ನೀರು ಕಾರಂಜಿಯಂತೆ ಚಿಮ್ಮಿದ ಪರಿಣಾಮ ಸುತ್ತಮುತ್ತಲಿನ ಜಮೀನು ಜಲಾವೃತಗೊಂಡಿದೆ.
ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆಯ ಕಾಮಗಾರಿಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಪೈಪ್‌ಲೈನ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮುಂಗಾರು ಮಳೆ ಕೈಕೊಟ್ಟ ಕಾರಣ ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಪೈಪ್‌ಲೈನ್ ಹಾನಿಗೀಡಾಗಿ ನೀರು ಪೋಲಾಗುತ್ತಿರುವುದು ರಾಜವಾಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net