ಬರಗಾಲದಲ್ಲಿ ಚಿಮ್ಮಿದ ನೀರು

ಬನ್ನಿಕಲ್ಲು ಗ್ರಾಮದ ಕೃಷಿ ಜಮೀನಿನಲ್ಲಿ ಹೊಸ ಕೊಳವೆಬಾವಿ ಯಿಂದ ನೀರು ಚಿಮ್ಮುತ್ತಿರುವುದು.
ಬನ್ನಿಕಲ್ಲು ಗ್ರಾಮದ ಕೃಷಿ ಜಮೀನಿನಲ್ಲಿ ಹೊಸ ಕೊಳವೆಬಾವಿ ಯಿಂದ ನೀರು ಚಿಮ್ಮುತ್ತಿರುವುದು.
Published on
ಹಗರಿಬೊಮ್ಮನಹಳ್ಳಿ: ಮಳೆಯಾಗದೆ ಅಂತರ್ಜಲ ಕುಸಿದಿರುವ ಈ ಸಂದರ್ಭದಲ್ಲಿ ಬನಿಕಲ್ಲು ಗ್ರಾಮದಲ್ಲಿ ಭಾನುವಾರ ಹೊಸ ಕೊಳವೆಬಾವಿ ಯಿಂದ ನೀರು ಚಿಮ್ಮಿದೆ.
ಗ್ರಾಮದ ವಿ.ಬಿ.ಸುನೀಲ್ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಿದ್ದು, 260 ಅಡಿ ಆಳದವರೆಗೆ ಕೊರೆಸಿದ್ದಾರೆ. ಆಗ 20ಅಡಿಗೂ ಹೆಚ್ಚು ಎತ್ತರದಲ್ಲಿ ನೀರು ಚಿಮ್ಮಿದೆ. ಕೃಷಿಯಲ್ಲಿ ತೊಡಗಿಕೊಳ್ಳಲು ಕೊಳವೆಬಾವಿ ಕೊರೆಸಿದ್ದೇನೆ. ನೀರು ಬಂದಿರುವುದು ದೈವ ಇಚ್ಛೆ ಎಂದು ಕೃಷಿಕ ಸುನೀಲ್ ಪ್ರತಿಕ್ರಿಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net