ಈರಣ್ಣ ಸ್ವಾಮಿಗೆ ಜಲಾಭಿಷೇಕ

ಸಿರಿಗೇರಿಯಲ್ಲಿ ಈರಣ್ಣ ಸ್ವಾಮಿಗೆ ಜಲಾಭಿಷೇಕ ನೆರವೇರಿಸಿದ ಚಿಣ್ಣರು.
ಸಿರಿಗೇರಿಯಲ್ಲಿ ಈರಣ್ಣ ಸ್ವಾಮಿಗೆ ಜಲಾಭಿಷೇಕ ನೆರವೇರಿಸಿದ ಚಿಣ್ಣರು.
Published on
ಸಿರಿಗೇರಿ: ಮಳೆ ಬೆಳೆ ಹಾಗೂ ಶಾಂತಿ ಸಮೃದ್ಧಿಗಾಗಿ ಭಕ್ತಾದಿಗಳು ಇಲ್ಲಿನ ಮೂರನೇ ವಾರ್ಡ್‌ನ ಕುಂಬಾರ ಓಣಿಯಲ್ಲಿ ಈರಣ್ಣ ಸ್ವಾಮಿಗೆ 101 ಬಿಂದಿಗೆಗಳ ಜಲಾಭಿಷೇಕ ನೆರವೇರಿಸಿದರು.
ಮುಂಜಾನೆಯೇ ಮಡಿ ಸ್ನಾನ ಮುಗಿಸಿ ಓಂ ಈರಣ್ಣ ಸ್ವಾಮಿಯೇ ನಮಃ ಎಂದು ಜಪಿಸುತ್ತಾ ಶ್ರದ್ಧಾಭಕ್ತಿಯಿಂದ ದೇವರ ನಾಮಸ್ಮರಣೆ ಮಾಡಿದರು. ಈ ವಿಶೇಷ ಸೇವೆಯಲ್ಲಿ ಪ್ರಮುಖರು ಮತ್ತು ಮಕ್ಕಳು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪ್ರಾರ್ಥಿಸಿದರು.
ಇದರೊಂದಿಗೆ ರಾತ್ರಿಯಿಂದ ಬೆಳಗಿನ ಜಾವದವರೆಗೆ ತಬಲ, ಡಕ್ಕೆ, ತಾಳ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಭಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಹನುಮೇಶ, ನಾಗರಾಜ, ಬಸವರಾಜ, ಹನುಮಂತರಾಯ, ಶಿವಪ್ಪ, ನಾಗೇಶ, ಕೆ ಹನುಮೇಶ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net