ಚಿಕ್ಕಜಾಯಗನೂರಿನ ಎಸ್ಸಿ ಕಾಲನಿಯಲ್ಲಿ ರಸ್ತೆ ಮಧ್ಯೆ ತ್ಯಾಜ್ಯ ಹರಿಯುತ್ತಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದುರ್ವಾಸನೆ
ನೈರ್ಮಲ್ಯ
ರಸ್ತೆ ಮಧ್ಯದಲ್ಲೇ ಹರಿಯುತ್ತೆ ತ್ಯಾಜ್ಯ
ಕಂಪ್ಲಿ: ಚಿಕ್ಕಜಾಯಗನೂರು ಗ್ರಾಮದ ಎಸ್ಸಿ ಕಾಲನಿಯ ಕೆಂಚಮ್ಮ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನವರೆಗೆ ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು, ರಸ್ತೆಗೆ ಹೊಂದಿಕೊಂಡಂತೆ ಚರಂಡಿ ಇಲ್ಲ. ಇದರಿಂದಾಗಿ ಮಳೆ ಬಂದಾಗ ನೀರು, ತ್ಯಾಜ್ಯ ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತದೆ. ರುದ್ರಭೂಮಿಗೆ ಅಂತ್ಯಕ್ರಿಯೆಗೆ ತೆರಳಲು ರಸ್ತೆ ಮೇಲಿನ ತ್ಯಾಜ್ಯದಲ್ಲೇ ಸಾಗಬೇಕಿದೆ.
ಕೆಂಚಮ್ಮನ ಗುಡಿ ಹಿಂಭಾಗದಲ್ಲಿ ಅಂಗನವಾಡಿ ಕೇಂದ್ರವಿದ್ದು, ಮಕ್ಕಳು ತ್ಯಾಜ್ಯದಲ್ಲೇ ನಡೆದುಕೊಂಡು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಚರಂಡಿ ನಿರ್ಮಿಸಿ ನೈರ್ಮಲ್ಯ ಕಾಪಾಡುವಂತೆ ನಿವಾಸಿಗಳಾದ ರಾಮಯ್ಯ, ಲಿಂಗಪ್ಪ, ಮಲ್ಲಯ್ಯ, ರಾಜಮ್ಮ, ಪಾರ್ವತ್ತಮ್ಮ, ಹಂಪಮ್ಮ, ಹುಲಿಗೆಮ್ಮ, ರುದ್ರಮ್ಮ ಒತ್ತಾಯಿಸಿದ್ದಾರೆ.
ರಸ್ತೆಯ ಎರಡು ಬದಿ ಚರಂಡಿ ನಿರ್ಮಿಸಲು ಶಾಸಕರು 25 ಲಕ್ಷ ರೂ. ಅನುದಾನ ಒದಗಿಸಿದ್ದರು. ಆದರೆ, ಜನರು ಸಹಕರಿಸದ ಕಾರಣ ಚರಂಡಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.
ಈ ಸಮಸ್ಯೆ ನಿವಾರಣೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚರಂಡಿ ನಿರ್ಮಾಣ ಕಾಮಗಾರಿಗಾಗಿ 2 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇಂಗುಗುಂಡಿ ನಿರ್ಮಿಸಿಕೊಳ್ಳಲು ಗ್ರಾಮಸ್ಥರು ಮುಂದಾಗುತ್ತಿಲ್ಲ ಎಂದು ಪಿಡಿಒ ಬೀರಲಿಂಗ ಹೇಳಿದರು.