ಹಸಿರು ಮರ ಕಡಿಯದಂತೆ ಎಚ್ಚರಿಕೆ

ಕೆ.ಎನ್.ಬಸವರಾಜ್
ಕೆ.ಎನ್.ಬಸವರಾಜ್
Published on

ಪ್ರಮುಖ ಮುಖ್ಯಾಂಶಗಳು

  • ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು
  • ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಬಳ್ಳಾರಿ : ಮೊಹರಂ ಹಬ್ಬದ ಆಚರಣೆಯ ವೇಳೆ ಪರಿಸರ ಸಂರಕ್ಷಣೆಗೆ ಧಕ್ಕೆ ಬರದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಬ್ಬದ ಪ್ರಯುಕ್ತ ರಾತ್ರಿ ಸಮಯದಲ್ಲಿ ನಡೆಸಲಾಗುವ ಆಲಾಯಿ ಕುಣಿತ’ ಮತ್ತು ಬೆಂಕಿ ಹಾಕುವ’ ಕಾರ್ಯಕ್ರಮಗಳಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ಮರಗಳನ್ನು ಕಡಿದು ಕುಣಿಗೆ ಹಾಕುವ ಪರಿಪಾಠವಿದೆ. ಮೊಹರಂ ಹಬ್ಬದ ಸಲುವಾಗಿ ಯಾವುದೇ ಹಸಿರು ಮರಗಳನ್ನು ಕಡಿಯದೇ, ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net