ಮನೆಮನೆಗೆ ಭೇಟಿ ನೀಡಿ

ಸಂಡೂರು ತಾಲೂಕಿನ ತೋರಣಗಲ್ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಒ ಪಿ.ನಾಗರಾಜ ಮಗುವಿಗೆ ಲಸಿಕೆ ಹಾಕಿದರು.
ಸಂಡೂರು ತಾಲೂಕಿನ ತೋರಣಗಲ್ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಒ ಪಿ.ನಾಗರಾಜ ಮಗುವಿಗೆ ಲಸಿಕೆ ಹಾಕಿದರು.
Published on
ಸಂಡೂರು: ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಲಸಿಕೆ ಹಾಕದಿದ್ದಲ್ಲಿ ಮಕ್ಕಳು ಶಾಶ್ವತ ಅಂಗ ವೈಕಲ್ಯಕ್ಕೊಳಗಾಗುವರು. ಆದ್ದರಿಂದ ಮನೆಮನೆಗೆ ಭೇಟಿ ನೀಡಿ ಲಸಿಕೆ ಹಾಕಿ ಎಂದರು.
ಟಿಎಚ್‌ಒ ಡಾ.ವೀರೇಂದ್ರ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಐದು ವರ್ಷದೊಳಗಿನ 35,818 ಮಕ್ಕಳಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ್ ಅನಿಲ್ ಕುಮಾರ್, ಮುಖ್ಯ ಆಡಳಿತ ವೈದ್ಯಾಧಿಕಾರಿ ಪವನ್ ಕುಮಾರ್, ಡಾ.ನವೀನ್ ಕುಮಾರ್, ಡಾ.ಕಿರಣ್ ಕುಮಾರ್, ಆಯುಷ್ ವೈದಾಧಿಕಾರಿ ಎಂ.ವಿರೂಪಾಕ್ಷ, ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net