

ಪ್ರಮುಖ ಮುಖ್ಯಾಂಶಗಳು
ಪಿಎಂ ಸ್ವನಿಧಿ ಹಾಗೂ ವಿಶ್ವಕರ್ಮ ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಾಗಿದ್ದು, ಸಾಲ ಮಂಜೂರು ಮಾಡುವಲ್ಲಿ ಬ್ಯಾಂಕ್ ಅಧಿಕಾರಿಗಳು ವಿಳಂಬ ಮಾಡಬಾರದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ನಿರ್ಲಕ್ಷೃ ತೋರಿಸಿದರೆ ಅಂತಹ ಬ್ಯಾಂಕ್‌ಗಳ ಮುಂದೆ ಧರಣಿ ನಡೆಸಲಾಗುವುದು.
ಪಿಎಂ ಸ್ವನಿಧಿ ಯೋಜನೆಯಡಿ 15 ಸಾವಿರ ರೂ. ಸಾಲಕ್ಕೆ ಪಟ್ಟಣದ ಎಸ್‌ಬಿಐ ಶಾಖೆಗೆ ಅರ್ಜಿ ಸಲ್ಲಿಸಿ ಸುಮಾರು ಮೂರು ತಿಂಗಳಾಗಿದ್ದು, ಇನ್ನೂ ಮಂಜೂರು ಆಗಿಲ್ಲ. ಬ್ಯಾಂಕ್ ವ್ಯವಸ್ಥಾಪಕರನ್ನು ಕೇಳಿದರೆ ಆಪ್ ಸರಿ ಇಲ್ಲ, ಲಾಗಿನ್ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸಾಲ ಸಿಗುತ್ತಾ ಇಲ್ಲ ಎಂದು ಕೇಳಿದರೆ ಅರ್ಜಿ ವಾಪಸ್ ತಗೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಸಾಲಕ್ಕಾಗಿ ಪಪಂ ಕಚೇರಿ ಹಾಗೂ ಬ್ಯಾಂಕ್ ಶಾಖೆಗೆ ಅಲೆದಾಡಿ ಸಾಕಾಗಿದೆ.
ಪಿಎಂ ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆಯ ಸಾಲ ಮಂಜೂರಾತ್ರಿ ಪ್ರಕ್ರಿಯೆಗೆ ನಮ್ಮ ಲಾಗಿನ್‌ನಲ್ಲಿ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡದಲ್ಲಿ ವಿಳಂಬವಾಗಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಾಲ ಮಂಜೂರಾದ ಕೂಡಲೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.