ಈ ಭಾಗದಡಿ ಉದ್ಯೋಗಿಗಳಿಗೆ ನೇರ ಲಾಭ ಸಿಗದಿದ್ದರೂ, ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುತ್ತದೆ. ಕೇಂದ್ರ ಸರ್ಕಾರದ ಈ ವಿನೂತನ ಯೋಜನೆಯು ಬಳ್ಳಾರಿ ಭಾಗದ ಸಾವಿರಾರು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕವಾಗಿ ದೊಡ್ಡ ಆಸರೆಯಾಗಿದೆ ಎಂದರು. ಕಚೇರಿಯ ಜಾರಿ ಅಧಿಕಾರಿ ಅಬ್ದುಲ್ ಹಫೀಜ್, ಮೇಲ್ವಿಚಾರಕ ಜಡೇಶ್ ಇದ್ದರು.