ಕುಂದಾಪುರದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಮಹಾಶಕ್ತಿ ಮಹಾಕಾಳಿ ನೂತನ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು. ಆರಾಧ್ಯ ಹಾಗೂ ಸನ್ನಿಧಿ ಅವರಿಂದ ಭರತನಾಟ್ಯ, ಓಂಕಾರ ನಾಟ್ಯ ಬಳಗದಿಂದ ಸಮೂಹ ನೃತ್ಯ, ಕೃಷ್ಣಪ್ರಿಯ ಕೋಲಾಟ ತಂಡದಿಂದ ಕೋಲಾಟ, ಮಹಿಳಾ ಮೈತ್ರಿಕೂಟ ಸದಸ್ಯರಿಂದ ನೃತ್ಯ, ಶ್ರೀ ಶಾರದಾ ನಾಟ್ಯ ಅಕಾಡೆಮಿ (ಕಲಾವೃಕ್ಷ)ತಂಡದಿಂದ ಭರತನಾಟ್ಯ ಸೇರಿದಂತೆ ಸ್ಥಳೀಯ ಕಲಾವಿದರು ಮತ್ತು ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆದವು.