ಸೂರಿಲ್ಲದವರಿಗೆ ವಾತ್ಸಲ್ಯ ಮನೆ ಆಸರೆ

ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಭೂಮಿ ಪೂಜೆ ಮಾಡಿದರು. ಗಾ.ಪಂ. ಅಧ್ಯಕ್ಷೆ ಸುವರ್ಣಮ್ಮ ತಡಕಲ್, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುಧೀರ್ ಹಂಗಳೂರು, ಪಿಡಿಒ ನಾಗವೇಣಿ ಅಥಲಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿಕೆ
  • ಸಿರಗುಪ್ಪ ವಾತ್ಸಲ್ಯ ಮನೆ ನಿರ್ಮಾಣ ಭೂಮಿ ಪೂಜೆ
ಸಿರಗುಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸಿನ ನೆರವು, ವಾತ್ಸಲ್ಯ ಮನೆ ಯೋಜನೆ ಬಡವರಿಗೆ ಆಸರೆಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ಸೋಮವಾರ 703ನೇ ವಾತ್ಸಲ್ಯ ಮನೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮ ಅವರ ಆಶಯದಂತೆ ಯಾರ ಪೋಷಣೆಯಲ್ಲೂ ಇರದವರನ್ನು ಗುರುತಿಸಿ, ಅವರಿಗೆ ವಾಸಿಸಲು ವಾತ್ಸಲ್ಯ ಮನೆ ನಿರ್ಮಿಸಿ ಕೊಡಲಾಗುತ್ತದೆ. ಈ ಪೈಕಿ ಗ್ರಾಮದ ಹೋಟೆಲ್ ನೀಲಮ್ಮ ಅವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎಂದರು.
ಗಾ.ಪಂ. ಅಧ್ಯಕ್ಷೆ ಸುವರ್ಣಮ್ಮ ತಡಕಲ್, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುಧೀರ್ ಹಂಗಳೂರು, ಪಿಡಿಒ ನಾಗವೇಣಿ ಅಥಲಿ, ಗ್ರಾ.ಪಂ. ಸದಸ್ಯರಾದ ಆಶಾ, ಕಾಡಸಿದ್ದಪ್ಪ, ಭಾಗ್ಯಮ್ಮ, ಮುತ್ತಯ್ಯ, ಮುಖ್ಯಗುರು ಮಂಜುನಾಥ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರಿಯಾ, ಕೃಷಿ ಮೇಲ್ವಿಚಾರಕ ವೀರೇಶ್, ವಲಯ ಮೇಲ್ವಿಚಾರಕಿ ರಾಧಿಕಾ, ಸೇವಾಪ್ರತಿನಿಧಿ ಶಕುಂತಲಾ, ಫಲಾನುಭವಿ ನೀಲಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net