ಅಲೌಕಿಕ ಸಾಧನೆಗೆ ಸಹಕಾರಿ ವಚನಗಳು

ಕಂಪ್ಲಿ ತಹಸಿಲ್ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತ್ಯುತ್ಸವ ಆಚರಿಸಲಾಯಿತು.
ಕಂಪ್ಲಿ ತಹಸಿಲ್ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತ್ಯುತ್ಸವ ಆಚರಿಸಲಾಯಿತು.
Published on
ಕಂಪ್ಲಿ: ವೇಮನ ಅವರ ವಚನಗಳಲ್ಲಿ ಸರಳವಾದ ಜೀವನ ತತ್ವಗಳಿವೆ ಎಂದು ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನಸಂಘದ ಅಧ್ಯಕ್ಷ ಇಟಗಿ ಬಸಲಿಂಗಪ್ಪ ಹೇಳಿದರು.
ಹೇಮ ವೇಮ ರೆಡ್ಡಿ ಜನಸಂಘದ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ವೇಮನ ಅವರ ವಚನಗಳು ಲೋಕಜ್ಞಾನ ಕುರಿತು ಸಾರುತ್ತವೆ. ಲೌಕಿಕ ಜೀವನದಲ್ಲಿದ್ದುಕೊಂಡೆ ಅಲೌಕಿಕ ಸಾಧನೆಗೆ ವೇಮನ ವಚನಗಳು ಸಹಕಾರಿಯಾಗಿವೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ವಿ.ಸುದರ್ಶನರೆಡ್ಡಿ ಮಾತನಾಡಿ, ರಾಜ್ಯದ ರೆಡ್ಡಿ ಸಮುದಾಯದವರಿಗೆ ಶಿಕ್ಷಣ, ಉದ್ಯೋಗಕ್ಕೆ ವಿಶೇಷ ಮೀಸಲಾತಿ ದೊರಕಬೇಕಿದೆ. ಪಟ್ಟಣದ ಹೇಮ ವೇಮ ರೆಡ್ಡಿ ಜನಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಪುರಸಭಾಡಳಿತ 100 ಅಡಿ ಉದ್ದಗಲದ ನಿವೇಶನ ನೀಡಬೇಕು. ಕಟ್ಟಡ ನಿರ್ಮಾಣಕ್ಕೆ ಶಾಸಕರು ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
ತಹಸಿಲ್ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತ್ಯುತ್ಸವಕ್ಕೆ ತಹಸೀಲ್ದಾರ್ ಜೂಗಲ ಮಂಜುನಾಯಕ ಚಾಲನೆ ನೀಡಿ, ವೇಮನ ಅವರ ವಚನಗಳು ಅರ್ಥೈಸಿಕೊಳ್ಳಲು ಸರಳವಾಗಿವೆ. ಮಕ್ಕಳಲ್ಲಿ ವೇಮನ ವಚನಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ರೆಡ್ಡಿ ಜನ ಸಂಘದ ಪದಾಧಿಕಾರಿಗಳಾದ ಡಾ.ಕೆ.ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ಪ್ರಭಾಕರರೆಡ್ಡಿ, ಎ.ವೆಂಕಟೇಶರೆಡ್ಡಿ, ನರಸಿಂಹರೆಡ್ಡಿ, ಲಕ್ಷ್ಮಣರೆಡ್ಡಿ, ಎ.ಶ್ರೀನಿವಾಸರೆಡ್ಡಿ, ಕಿಶೋರರೆಡ್ಡಿ, ಮೋಹನರೆಡ್ಡಿ, ಕ್ರಷ್ಣರೆಡ್ಡಿ, ರಾಜಶೇಖರರೆಡ್ಡಿ, ದುರ್ಗಾಪ್ರಸಾದರೆಡ್ಡಿ, ಸಂದೀಪರೆಡ್ಡಿ, ಮುರುಳಿಮೋಹನರೆಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net