ಖಾತೆ ಬಳಸಿ, ಹಣ ವರ್ಗಾವಣೆ

ಖಾತೆ ಬಳಸಿ, ಹಣ ವರ್ಗಾವಣೆ
ಖಾತೆ ಬಳಸಿ, ಹಣ ವರ್ಗಾವಣೆ
Published on

ಪ್ರಮುಖ ಮುಖ್ಯಾಂಶಗಳು

  • ವರ್ಗಾವಣೆ
ಬಳ್ಳಾರಿ : ವ್ಯಕ್ತಿಯೊಬ್ಬರ ದಾಖಲೆಗಳು ಬಳಸಿ, ಬ್ಯಾಂಕ್ ಖಾತೆ ತೆರೆದು 64.62 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಪಾರ್ವತಿನಗರದ ನಿವಾಸಿ ಡಿ. ಸಿದ್ದೇಶ್ ಅವರನ್ನು 2025ರ ಜನವರಿಯಲ್ಲಿ ಭೇಟಿಯಾಗಿದ್ದ ಇಕ್ಬಾಲ್, ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದ. ಇವರ ಹೆಸರಿನಲ್ಲಿ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಬಳಾರಿ ಕಂಪ್ಯೂಟರ್ ಸಿಸ್ಟಮ್ಸ್ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆಸಿದ್ದ. ಖಾತೆ ತೆರೆಯುವ ನೆಪದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಿಎಸ್‌ಟಿ ಪ್ರತಿ ಹಾಗೂ ಭಾವಚಿತ್ರಗಳನ್ನು ಇಕ್ಬಾಲ್ ಪಡೆದುಕೊಂಡಿದ್ದ. ಮತ್ತೊಂದಡೆ ಸಿದ್ದೇಶ್ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಟಿಎಂ ಕಾರ್ಡ್, ಚೆಕ್ ಬುಕ್ ಮತ್ತು ಕ್ಯೂಆರ್ ಕೋಡ್ ತಾನೇ ಇಟ್ಟುಕೊಂಡಿದ್ದ. 2025ರ ಫೆ.10ರಿಂದ ಮಾ.25ರ ಮಧ್ಯೆ ಈ ಖಾತೆಗೆ ಸಾರ್ವಜನಿಕರಿಂದ 64,62,725 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ಸಿದ್ದೇಶ್ ಅವರು ಇಕ್ಬಾಲ್ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net