ತೋರಣಗಲ್ ಸರ್ಕಾರಿ ಆಸ್ಪತ್ರೆ ಮುಂದೆ ಡಿವೈಎಫ್‌ಐ ಸಂಘಟಕರು ಪ್ರತಿಭಟನೆ ನಡೆಸಿ ಪ್ರಭಾರ ತಾಲೂಕು ವೈದ್ಯಾಧಿಕಾರಿ ಹರೀಶ್‌ಗೆ ಮನವಿ ಸಲ್ಲಿಸಿದರು. ದೇವದಾಸಿ ವಿಮೋಚನಾ ಸಂಘ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಸಿಡಬ್ಲುೃಎಫ್‌ಐ ಜಿಲ್ಲಾ ಉಪಾಧ್ಯಕ್ಷ ವಿ.ದೇವಣ್ಣ, ಡಿವೈಎಫ್‌ಐ ತಾಲೂಕು ಅಧ್ಯಕ್ಷ ಶರೀಫ್, ಕಾರ್ಯದರ್ಶಿ ನಾಗಭೂಷಣ, ಮುಖಂಡರಾದ ಲೋಕೇಶ್, ಅನಿಲ್, ಶಂಕ್ರಮ್ಮ, ಕಲಂದರ್ ಬಾಷಾ, ಹಾಲಸ್ವಾಮಿ, ಒ. ಅಂಬರೀಶ್, ಸಿದ್ದಪ್ಪ, ಎಚ್. ತಾಯಪ್ಪ, ಕೆ.ರಾಮಚಂದ್ರ ಇತರರಿದ್ದರು.
ಪ್ರಭಾರ ತಾಲೂಕು ವೈದ್ಯಾಧಿಕಾರಿ ಹರೀಶ್‌ಗೆ ಡಿವೈಎಫ್‌ಐ ಮನವಿ
ಸಂಡೂರು:
ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರವನ್ನು 200 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಕಲ್ಪಿಸುವಂತೆ ಡಿವೈಎಫ್‌ಐ ಸಂಘಟನೆ ಸೋಮವಾರ ಪ್ರಭಾರ ತಾಲೂಕು ವೈದ್ಯಾಧಿಕಾರಿ ಹರೀಶ್‌ಗೆ ಮನವಿ ಸಲ್ಲಿಸಿತು.
ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ ಮಾತನಾಡಿ, ತೋರಣಗಲ್ ಕೈಗಾರಿಕಾ ಪ್ರದೇಶವಾಗಿದ್ದು, ಹೋಬಳಿ ಮಟ್ಟದಲ್ಲಿ ಒಟ್ಟು 9 ಗ್ರಾಪಂ, ಒಂದು ಪುರಸಭೆ ವ್ಯಾಪ್ತಿಯ 41 ಹಳ್ಳಿಗಳ ಜನರು ಸುಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲವೆಂದು ಸಂಘಟಕರು ದೂರದಿರು.
ಕೂಡಲೇ ಆಸ್ಪತ್ರೆ ಮೇಲ್ದರ್ಜೆಗೇರಿಸಿ ದಿನ 24 ಗಂಟೆಯೂ ಶುದ್ಧ ನೀರು ಸಿಗುವ ವ್ಯವಸ್ಥೆ ಮಾಡಬೇಕು. ಆಸ್ಪತ್ರೆ ಮುಂಭಾಗ ಮತ್ತು ಸುತ್ತಮುತ್ತಲಿನ ಆವರಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಶವಗಾರ ಕಟ್ಟಡ ನಿರ್ಮಿಸಬೇಕು. ದಿನದ 24ಗಂಟೆಯೂ ವೈದ್ಯರು ಲಭ್ಯವಿರುವಂತೆ ಕ್ರಮವಹಿಸಬೇಕು. ವೈದ್ಯರು-ಸಿಬ್ಬಂದಿ ವಸತಿಗೃಹ ಸಂಖ್ಯೆ ಹೆಚ್ಚು ಮಾಡಬೇಕು. ರಕ್ತ ಪರೀಕ್ಷೆ ಉಚಿತ ತಪಾಸಣೆ, ಅಗತ್ಯ ಸಲಕರಣೆ ನೀಡಿಕೆ, ಬಿಪಿ, ಸಕ್ಕರೆ ಕಾಯಿಲೆ ತಜ್ಞರ ಇರುವಿಕೆ, ಒಳರೋಗಿ, ಗರ್ಭಿಣಿಯರು ಮತ್ತು ಸಹಾಯಕರಿಗೆ ಶುದ್ಧ ಆಹಾರ ವ್ಯವಸ್ಥೆ, ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿ ಸುರಕ್ಷತೆಗಾಗಿ ಕಾವಲುಗಾರರನ್ನು ನೇಮಕ ಮಾಡಬೇಕು. ತಾಳೂರು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟಿಎಚ್‌ಒ, ಶೀಘ್ರವೇ ಡಿಎಚ್‌ಒ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲಿದ್ದು ಆಗ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಲಾಗುವುದು ಎಂದರು.