ಶಾಲೆಯಲ್ಲಿ ನಿರುಪಯುಕ್ತ ಶೌಚಗೃಹ

ಸೋಮಲಾಪುರ ಸರ್ಕಾರಿ ಶಾಲೆಯ ಶೌಚಗೃಹ ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿರುವುದು.
ಸೋಮಲಾಪುರ ಸರ್ಕಾರಿ ಶಾಲೆಯ ಶೌಚಗೃಹ ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸೋಮಲಾಪುರ ಸರ್ಕಾರಿ ಸ್ಕೂಲ್ ವಿದ್ಯಾರ್ಥಿಗಳ ಪರದಾಟ
  • ಸರ್ಕಾರಿ ಶಾಲೆ ಕೊಠಡಿ ಛಾವಣಿ
ವಿರೂಪಾಕ್ಷಿ ಕಡ್ಲೆ ಕಲ್ಲುಕಂಬ
ಕುರುಗೋಡು: ಸೋಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ (ಆರ್‌ಎಂಎಸ್‌ಎ) ಶಾಲೆಯಲ್ಲಿ ಶೌಚಗೃಹಗಳ ನಿರ್ವಹಣೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಶೌಚಕ್ಕೆ ಬಯಲಿಗೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ.
ಶಾಲೆಯಲ್ಲಿ ಎಲ್‌ಕೆಜಿಯಿಂದ ಹತ್ತನೇ ತರಗತಿವರೆಗೆ 311ಗಂಡು, 294 ಹೆಣ್ಣು ಸೇರಿದಂತೆ ಒಟ್ಟು 606 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಜನ ಕಾಯಂ ಮತ್ತು 13 ಅತಿಥಿ ಶಿಕ್ಷಕರಿದ್ದಾರೆ. ಇನ್ನು ಪ್ರೌಢ ಶಾಲೆಯಲ್ಲಿ ಒಬ್ಬ ಕಾಯಂ ಮತ್ತು ಐದು ಜನ ಅತಿಥಿ ಶಿಕ್ಷಕರಿದ್ದಾರೆ.
ಶಾಲೆಯಲ್ಲಿ 16 ಕೊಠಡಿಗಳಿದ್ದು, ನಾಲ್ಕು ಶಿಥಿಲಗೊಂಡಿದ್ದು, 2024-2025 ಸಾಲಿನಲ್ಲಿ 29 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಉಳಿದ ಎರಡು ಕೊಠಡಿಗಳು ಬೀಳುವ ಸ್ಥಿತಿಯಲ್ಲಿವೆ. ಮಕ್ಕಳಿಗಾಗಿ ಪ್ರತ್ಯೇಕ ಮೂರು ಶೌಚಗೃಹ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಮತ್ತು ನೀರಿನ ಸಂಪರ್ಕ ಇಲ್ಲದೆ ಗಬ್ಬು ನಾರುತ್ತಿವೆ.
ಪಕ್ಕದಲ್ಲೇ ಅಡುಗೆ ಹಾಗೂ ಮೊಟ್ಟೆಯ ತ್ಯಾಜ್ಯದ ರಾಶಿಯೂ ಬಿದಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ಶಾಲೆಯ ಸುತ್ತ ಮನೆಗಳಿದ್ದು ವಿದ್ಯಾರ್ಥಿಗಳು ಅನಿವಾರ್ಯವಾಗಿ ದೂರದ ಬಯಲಿನಲ್ಲಿರುವ ಬೇಲಿಯಲ್ಲಿ ಶೌಚಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ವೈರಲ್ ಆಗಿತ್ತು ವಿಡಿಯೋ
ಶಾಸಕ ಜೆ.ಎನ್.ಗಣೇಶ್ ಇತ್ತೀಚೆಗೆ ಶಾಲೆಗೆ ಆಗಮಿಸಿ ಕೊಠಡಿ ಉದ್ಘಾಟಿಸುವಾಗ ಮಕ್ಕಳು ಹೂ ಚೆಲ್ಲಿ ಸ್ವಾಗತಿಸಿದ್ದರು. ಇದೇ ವಿಡಿಯೋ ಬಳಸಿಕೊಂಡು ಗ್ರಾಮದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಶೌಚಗೃಹ ಇಲ್ಲದಿರುವ ಬಗ್ಗೆ ಶಾಸಕರಿಗೆ ಪ್ರಶ್ನೆ ಮಾಡಿದ್ದ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿತ್ತು.
"

ಶೌಚಗೃಹ ನಿರ್ವಹಣೆ ಇಲ್ಲದೆ ಈ ರೀತಿಯ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು.

"

ಶಾಲೆಯಲ್ಲಿನ ಶೌಚಗೃಹ ಸಮಸ್ಯೆ ಬಗ್ಗೆ ಶಾಸಕ ಜೆ.ಎನ್.ಗಣೇಶ್ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರಿಂದ ಸ್ಪಂದನೆ ಸಿಕ್ಕಿದ್ದು, ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net