ಗುರುವಿನ ವಾಕ್ಯ ಪಾಲನೆ ಮಾಡುವವರೇ ನಿಜವಾದ ಭಕ್ತರು

ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ರುದ್ರಾಭಿಷೇಕ, ಇಷ್ಟಲಿಂಗ ಪೂಜೆ ನೆರವೇರಿಸಿದ ನಂತರ ಸನ್ಮಾನಿಸಲಾಯಿತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ದಾರುಕೇಶ್, ಉದ್ಯಮಿ ಸುನಿಲ್ ಗುಪ್ತಾ ಇತರರಿದ್ದರು.
ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ರುದ್ರಾಭಿಷೇಕ, ಇಷ್ಟಲಿಂಗ ಪೂಜೆ ನೆರವೇರಿಸಿದ ನಂತರ ಸನ್ಮಾನಿಸಲಾಯಿತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ದಾರುಕೇಶ್, ಉದ್ಯಮಿ ಸುನಿಲ್ ಗುಪ್ತಾ ಇತರರಿದ್ದರು.
Published on
ಕೂಡ್ಲಿಗಿ: ತಟ್ಟೆಯಲ್ಲಿ ಅನ್ನ ಬಿಟ್ಟು ಚೆಲ್ಲುವುದು ರೈತರಿಗೆ ಹಾಗೂ ಅನ್ನಪೂರ್ಣೇಶ್ವರಿಗೆ ಮಾಡುವ ಅಪಮಾನ. ಆದ್ದರಿಂದ ಅನ್ನವನ್ನು ಯಾರು ಚೆಲ್ಲಬಾರದು ಎಂದು ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗುಂಡುಮುಣುಗು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು. ಒಬ್ಬ ರೈತ ಬೆವರು ಸುರಿಸಿ ಬೆಳೆದ ಬೆಳೆಯನ್ನು ತಂದು ಅಡುಗೆ ಮಾಡಿ, ಅದನ್ನು ಸಂಪೂರ್ಣವಾಗಿ ಊಟ ಮಾಡಿದಾಗ ಮಾತ್ರ ರೈತರ ಬೆವರು ಒರೆಸಿದ ಪುಣ್ಯ ಪ್ರತಿಯೊಬ್ಬರಿಗೂ ಸಿಗುತ್ತದೆ. ಆಕಸ್ಮಿಕವಾಗಿ ಅನ್ನ ಚೆಲ್ಲವುದು ಬೇರೆ. ಆದರೆ, ತಟ್ಟೆಯೊಳಗೆ ಅನ್ನ ಬಿಟ್ಟು ಚೆಲ್ಲವುದು ಒಂದು ಪ್ಯಾಷನ್ ಎನ್ನುವುದಾದರೆ ಅದು ದೊಡ್ಡ ಪಾಪದ ಕೆಲಸ. ಹಸಿವಾದಾಗ ಅನ್ನ ಸಿಗದೇ ಇದ್ದರೆ ನೋವಾಗುತ್ತದೆ. ಬಂಗಾರ, ಹಣ ತಿನ್ನಲು ಬರುವುದಿಲ್ಲ. ಅದ್ದರಿಂದ ಅನ್ನಕ್ಕೆ ಹಾಗೂ ಮಾನವೀಯತೆಗೆ ನಾವು ಬೆಲೆ ಕೊಡಬೇಕಾಗಿದೆ ಎಂದರು.
ಯಾವುದೇ ವಿಷಯವನ್ನು ನಾವು ಶ್ರದ್ಧೆ, ನಿಷ್ಠೆಯಿಂದ ಕೇಳಬೇಕು. ಹಿರಿಯರು ಹೇಳಿದ ವಿಷಯಗಳ ಬಗ್ಗೆ ಚಿಂತನೆ ಮಾಡಿ, ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ನೋವುಗಳ ಜತೆಗೆ ಬೇರೆಯವರ ನೋವುಗಳನ್ನು ನಾವು ಅರ್ಥ ಮಾಡಿಕೊಂಡು, ಅವುಗಳನ್ನು ಪರಿಹಾರ ಮಾಡುವವರು ಜನರ ದೃಷ್ಟಿಯಲ್ಲಿ ಹೃದಯವಂತರು, ಭಗವಂತರೂ ಅಗುತ್ತಾರೆ. ಮನುಷ್ಯರಾಗಿ ಹುಟ್ಟಿದ ನಾವು ಕಣ್ಣೀರ ಒರೆಸುವ ಕೆಲಸ ಮಾಡಬೇಕು. ಹುಟ್ಟು ಸಾವು ಆಕಸ್ಮಿಕ. ಅದರ ನಡುವೆ ಸುಂದರ ಬದುಕು ಕಟ್ಟಿಕೊಂಡು ಜೀವಿಸಬೇಕು. ನಮಗೆ ದೇವರು ಜ್ಞಾನ ಕೊಟ್ಟಿದ್ದು ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳಲು. ಹೀಗಾಗಿ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಗುರುವಿನ ಅನುಪಸ್ಥಿತಿಯಲ್ಲಿ ಗುರುವಿನ ವಾಕ್ಯ ಪರಿಪಾಲನೆ ಮಾಡುವವರು ನಿಜವಾದ ಭಕ್ತನಾಗುತ್ತಾನೆ. ಪುಣ್ಯ, ವಿದ್ಯೆ, ಆರೋಗ್ಯ ಮತ್ತು ಸಂಸ್ಕಾರವನ್ನು ನಾವು ಗಳಿಸಬೇಕು. ಪುಣ್ಯವೊಂದೆ ನಮ್ಮ ರಕ್ಷಣೆಗೆ ನಿಲ್ಲುತ್ತದೆ. ಆದ್ದರಿಂದ ನಾವು ಬೇರೆಯವರಿಗೆ ನೆರವು ನೀಡುವುದರ ಮೂಲಕ ಸದಾಕಾಲ ಅನ್ಯರಿಗೆ ಒಳ್ಳೆಯದನ್ನೇ ಬಯಸಬೇಕು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದಾರುಕೇಶ್, ಉದ್ಯಮಿ ಸುನಿಲ್ ಗುಪ್ತಾ, ಮಾಜಿ ಶಾಸಕ ಟಿ.ಎಂ.ಚಂದ್ರಶೇಖರಯ್ಯ, ಬ್ಯಾಂಕ್ ನಿರ್ದೇಶಕರಾದ ಮೂಕಯ್ಯಸ್ವಾಮಿ, ಎರ‌್ರಿಸ್ವಾಮಿ, ನವೀನ್ ರೆಡ್ಡಿ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಗೌಡ, ಎಪಿಎಂಸಿ ಅಧ್ಯಕ್ಷ ಬೋಸಣ್ಣ, ನರಸಿಂಹಗಿರಿ ವೆಂಕಟೇಶ, ಮಂಜುನಾಥ, ಇಂಜಿನಿಯರ್ ಕೆ. ನಾಗನಗೌಡ, ಜಗದೀಶ್, ಎಚ್. ರೇವಣ್ಣ, ಎನ್.ಪಿ.ಮಂಜುನಾಥ ಹಾಗೂ ಗ್ರಾಮದ ಪ್ರಮುಖರು ಇದ್ದರು. ಇದಕ್ಕೂ ಮೊದಲು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಮನೆಯಲ್ಲಿ ರುದ್ರಾಭಿಷೇಕ, ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net