ಹೈ ಟೆನ್ಷನ್ ವೈರ್ ತಗುಲಿ ಹತ್ತಿ ಲಾರಿಗೆ ಬೆಂಕಿ

ಬಳ್ಳಾರಿಯ ಅಂಜಿನಪ್ಪ ನಗರದ ಬಳಿ ಹತ್ತಿಯ ಲಾರಿಗೆ ಬೆಂಕಿ ಹಚ್ಚಿಕೊಂಡಿರುವುದು.
ಬಳ್ಳಾರಿಯ ಅಂಜಿನಪ್ಪ ನಗರದ ಬಳಿ ಹತ್ತಿಯ ಲಾರಿಗೆ ಬೆಂಕಿ ಹಚ್ಚಿಕೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾಟನ್‌ಮಿಲ್‌
ಬಳ್ಳಾರಿ : ನಗರದ ಕಾಟನ್‌ಮಿಲ್‌ನಿಂದ ರಾಜಸ್ಥಾನಕ್ಕೆ ಸಾಗಿಸಲಾಗುತ್ತಿದ್ದ ಹತ್ತಿಯ ಲಾರಿಗೆ ರಸ್ತೆಯಲ್ಲಿನ ಹೈ ಟೆನ್ಷನ್ ವೈರ್ ತಗುಲಿ ಲಕ್ಷಾಂತರ ರೂ. ಮೌಲ್ಯದ ಹತ್ತಿ ಬೆಂಕಿಗೆ ಆಹುತಿಯಾಗಿದೆ.
ಇಲ್ಲಿನ ಅಂಜಿನಪ್ಪ ನಗರದಲ್ಲಿ ರಸ್ತೆಗೆ ಅಡ್ಡಲಾಗಿ ಹಾದುಹೋಗಿದ್ದ ಹೈ ಟೆನ್ಷನ್ ವಿದ್ಯುತ್ ತಂತಿ ಲಾರಿಯ ಮೇಲ್ಭಾಗಕ್ಕೆ ತಗುಲಿದೆ. ಕ್ಷಣಾರ್ಧದಲ್ಲಿ ಹತ್ತಿಗೆ ಬೆಂಕಿ ಹೊತ್ತಿಕೊಂಡಿದೆ. ಅಂದಾಜು 35 ಲಕ್ಷ ರೂ. ಮೌಲ್ಯದ ಹತ್ತಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ನಂದಿಸಲು ಸೂಕ್ತ ನೀರಿನ ವ್ಯವಸ್ಥೆ ಲಭ್ಯವಾಗದ ಕಾರಣ, ಅಲ್ಪಸ್ವಲ್ಪ ಉಳಿದಿದ್ದ ಹತ್ತಿಯೂ ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹಾನಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್‌ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಆಗ್ನಿಶಾಮಕ ಅಧಿಕಾರಿ ತಿಳಿಸಿದರು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net